ಆಗಸ್ಟ್ ೧೩ ರಿಂದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನಯಾನ ಸೇವೆ

posted in: ರಾಜ್ಯ | 0

ಬೆಂಗಳೂರು: ೨೦೨೧ ಆಗಸ್ಟ್ ೧೩ ರಿಂದ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನಯಾನ ಸೇವೆ ಆರಂಭಿಸುವುದಾಗಿ ಸ್ಪೈಸ್ ಜೆಟ್ ಸೇರಿದಂತೆ ಹಲವು ವಿಮಾನಗಳು ಸಂಚಾರವನ್ನು ಆರಂಭಿಸಲಿವೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ನೇರ ವಿಮಾನಯಾನಕ್ಕೆ ಅಲ್ಲಿನ ಸಂಸದರು, ಶಾಸಕರು, ಮಂತ್ರಿಗಳು ಸೇರಿದಂತೆ ಉದ್ಯಮಿಗಳು, ನಾಗರಿಕರು ಬೇಡಿಕೆ ಇಟ್ಟಿದ್ದರು. ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಾಯುಪಡೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಾಮ್ಯದ ಸಂಸ್ಥೆಗಳು ಬೆಳಗಾವಿಯಲ್ಲಿದೆ. ಹೀಗಾಗಿ ದೆಹಲಿಗೆ ನೆರ ವಿಮಾನದ ಅವಶ್ಯಕತೆ ಹೆಚ್ಚಾಗಿತ್ತು.

ಬೇಡಿಕೆಗೆ ಸ್ಪಂದಿಸಿದ ಸ್ಪೈಸ್ಜೆಟ್ ಇದೀಗ, ಸೋಮವಾರ ಹಾಗೂ ಶುಕ್ರವಾರ ವಾರದಲ್ಲಿ ಎರಡು ದಿನ ಬೆಳಗಾವಿಯಿಂದ ನೇರವಾಗಿ ದೆಹಲಿಗೆ ವಿಮಾನ ಸೇವೆ ಆರಂಭಿಸುತ್ತಿದೆ. ೧೪೯ ಪ್ರಯಾಣಿಕರನ್ನು ಸಾಗಿಸಬಲ್ಲ ಸಾಮರ್ಥ್ಯದ ಬೋಯಿಂಗ್ ೭೩೭ ವಿಮಾನ, ಬೆಳವಾಗಿಯಿಂದ ದೆಹಲಿಗೆ ಹಾರಾಟ ನಡೆಸಲಿದೆ.

ದೆಹಲಿಯಿಂದ ಬೋಯಿಂಗ್ ೭೩೭ ಸ್ಪೈಸ್ಜೆಟ್ ವಿಮಾನ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಜೆ ೪.೩೫ಕ್ಕೆ ಆಗಮಿಸಲಿದೆ. ಸಂಜೆ ೫.೦೫ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ದೆಹಲಿಗೆ ಹಾರಲಿದೆ.

ಸದ್ಯ ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ೧೨ ಪ್ರಮುಖ ನಗರಗಳಿಗೆ ವಿಮಾನ ಸೇವೆ ಲಭ್ಯವಿದೆ. ಬೆಂಗಳೂರು, ಮೈಸೂರು, ಕಡಪಾ, ತಿರುಪತಿ, ಮುಂಬೈ, ಪುಣೆ, ಅಹಮ್ಮದಾಬಾದ್, ನಾಸಿಕ್, ಹೈದರಾಬಾದ್, ಇಂದೋರ್, ಸೂರತ್ ಹಾಗೂ ಜೋಧಪುರಕ್ಕೆ ವಿಮಾನ ಸೇವೆ ಲಭ್ಯವಿದೆ.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

ಇದೀಗ ದೆಹಲಿ ಕೂಡ ಸೇರಿಕೊಂಡಿದೆ. ಅಲೈಯನ್ಸ್ ಏರ್, ಸ್ಪೈಸ್ ಜೆಟ್, ಸ್ಟಾರ್ ಏರ್, ಇಂಡಿಗೊ ಮತ್ತು ಟ್ರೂಜೆಟ್ ವಿಮಾನ ಸೇವೆ ನೀಡುತ್ತಿದೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement