ಕೇರಳದಲ್ಲಿ ಸತತ ಎರಡನೇ ದಿನ 22,000ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕು ದಾಖಲು

ತಿರುವನಂತಪುರಂ: ಕೇರಳದಲ್ಲಿ 22,000 ಕ್ಕೂ ಹೆಚ್ಚು ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಬುಧವಾರ ರಾಜ್ಯದಲ್ಲಿ 22,056 ಹೊಸ ಪ್ರಕರಣಗಳು ವರದಿಯಾಗಿದ್ದು, ನಿನ್ನೆ 22,129 ಹೊಸ ಸೋಂಕುಗಳು ದಾಖಲಾಗಿತ್ತು. ಕೇರಳದಲ್ಲಿ ಸತತ ಎರಡನೇ ದಿನ 22,000 ಕ್ಕೂ ಹೆಚ್ಚು ಸೋಂಕು ವರದಿಯಾಗಿದೆ.
ಇದೇ ಸಮಯದಲ್ಲಿ, ರಾಜ್ಯದಲ್ಲಿ 131 ಸಾವುಗಳು ವರದಿಯಾಗಿವೆ. ಪ್ರಸ್ತುತ, ರಾಜ್ಯದಲ್ಲಿ 1,49,534 ಸಕ್ರಿಯ ಪ್ರಕರಣಗಳಿವೆ. ಇದೇ ಸಮಯದಲ್ಲಿ 17,761 ಸೋಂಕಿತರು ಚೇತಿರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿವೆ.
ಮಂಗಳವಾರ, ರಾಜ್ಯದ ಐದು ಜಿಲ್ಲೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ಮಲಪ್ಪುರಂ 4,037 ಪ್ರಕರಣಗಳು ದಾಖಲಾಗಿದೆ.. ನಂತರದ ಸ್ಥಾನದಲ್ಲಿ ತ್ರಿಶೂರ್ 2,623, ಕೋಜಿಕೋಡ್ 2,397, ಎರ್ನಾಕುಲಂ 2,352, ಪಾಲಕ್ಕಾಡ್ 2,115, ಕೊಲ್ಲಂ 1,914, ಕೊಟ್ಟಾಯಂ 1,136, ತಿರುವನಂತಪುರಂ 1,100, ಕಣ್ಣೂರು 1,072 ಮತ್ತು ಆಲಪ್ಪುಳ 1,064 ನಂತರದ ಸ್ಥಾನದಲ್ಲಿದೆ. ಹೊಸ ಪ್ರಕರಣಗಳಲ್ಲಿ 116 ಆರೋಗ್ಯ ಕಾರ್ಯಕರ್ತರು, 124 ಜನರು ರಾಜ್ಯದ ಹೊರಗಿನಿಂದ ಬಂದಿದ್ದಾರೆ ಮತ್ತು 20,914 ಮಂದಿ ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ, 975 ಪ್ರಕರಣಗಳಲ್ಲಿ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement