ತೆಲಂಗಾಣ ಪೊಲೀಸರಿಂದ 7.3 ಕೋಟಿ ರೂ. ಮೌಲ್ಯದ ಗಾಂಜಾ ವಶ

ಹೈದರಾಬಾದ್‌ :ಜುಲೈ 27 ರ ಮಂಗಳವಾರ ತೆಲಂಗಾಣ ಪೊಲೀಸರು ಒಟ್ಟು 3,653 ಕಿಲೋಗ್ರಾಂ ತೂಕದ 7.3 ಕೋಟಿ ರೂ.ಗಳ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ತೆಲಂಗಾಣದ ಭದ್ರಾಡ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಈ ಮಾದಕ ದ್ರವ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಭದ್ರಾಡ್ರಿ ಕೊಥಗುಡೆಮ್ಮಿನಲ್ಲಿ ಇದು ಎರಡನೇ ಪ್ರಮುಖ ಡ್ರಗ್‌ ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ವಾಡಿಕೆಯ ತಪಾಸಣೆಯ ಸಮಯದಲ್ಲಿ ಎರಡು ವ್ಯಾನ್‌ಗಳಲ್ಲಿ ಡ್ರಗ್ಸ್‌ ಪತ್ತೆಯಾಗಿವೆ. ಮಾದಕ ದ್ರವ್ಯವನ್ನು 104 ಚೀಲಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಅವರೊಂದಿಗೆ ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಭದ್ರಾಡ್ರಿ ಕೊಥಗುಡೆಮ್ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವ್ಯಾನ್ ಚಾಲಕನನ್ನು ವಿಚಾರಣೆ ನಡೆಸಿದಾಗ ಆಂಧ್ರಪ್ರದೇಶದ ಚಿಂಟೂರಿನಲ್ಲಿ ಗಾಂಜಾ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಇದನ್ನು ಹೈದರಾಬಾದ್ ಮತ್ತು ನಂತರ ಹರಿಯಾಣಕ್ಕೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಜುಲೈನಲ್ಲಿ ಭದ್ರಾಡ್ರಿ ಕೊಥಗುಡೆಮ್ ಪೊಲೀಸರು 450 ಕಿಲೋಗ್ರಾಂ ತೂಕದ 90 ಲಕ್ಷ ರೂ.ಗಳ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಜನರನ್ನು ಬಂಧಿಸಿದ್ದಾರೆ.ಡ್ರಗ್ಸ್‌ ಅನ್ನು ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು ಮತ್ತು ಪೆಟ್ಟಿಗೆಯೊಳಗೆ ಮರೆಮಾಡಲಾಗಿತ್ತು,
ಏಪ್ರಿಲ್ಲಿನಲ್ಲಿ, ಭದ್ರಾಡ್ರಿ ಕೊಥಗುಡೆಮ್ ಪೊಲೀಸರು ಒಂದು ವಾಹನದಿಂದ 2,000 ಕಿಲೋಗ್ರಾಂಗಳಷ್ಟು ತೂಕದ 3.31 ಕೋಟಿ ರೂ.ಗಳ ಗಾಂಜಾವನ್ನು ವಶಪಡಿಸಿಕೊಂಡಿದ್ದರು ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.
ಈ ಜುಲೈನಲ್ಲಿ 126 ಕಿಲೋಗ್ರಾಂಗಳಷ್ಟು ತೂಕದ 12.6 ಲಕ್ಷ ರೂ.ಗಳ ಗಾಂಜಾವನ್ನು ಜಂಗಾಂವ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇ ಹಳದಿ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸಲಾಗುತ್ತಿತ್ತು.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement