

ಹುಬ್ಬಳ್ಳಿ: “ಒಂದು ಪಾಕೆಟ್‌ನಲ್ಲಿ ಡಿ.ಕೆ. ಶಿವಕುಮಾರ ಇನ್ನೊಂದು ಪಾಕೆಟ್‌ನಲ್ಲಿ ಲಕ್ಷ್ಮೀ ಹೆಬ್ಬಾಳಕರ, ಹು-ಧಾ ಮಹಾನಗರ ಪಾಲಿಕೆಯ ೨೫ ವಾರ್ಡುಗಳ ಟಿಕೆಟ್ ನನ್ನ ಕಿಸೆಯಲ್ಲಿವೆ ಹೀಗೆಲ್ಲ ಹೇಳಿಕೊಂಡು ಕಾಂಗ್ರೆಸ್ಸಿನ ರಜತ ಉಳ್ಳಾಗಡ್ಡಿಮಠ ಅವರು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಅದೇ ಪಕ್ಷದ ಗಿರೀಶ ಗದಿಗೆಪ್ಪಗೌಡರ್ ಕಾಂಗ್ರೆಸ್ ಹೈಕಮಾಂಡ್ ಎದುರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೆಳಗಾವಿ ಕಂದಾಯ ವಿಭಾಗದ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಕಾಂಗ್ರೆಸ್ಸಿನ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ರಾಜ್ಯ ನಾಯಕರು ಪಾಲ್ಗೊಂಡಿದ್ದರು. ಇವರ ಮುಂದೆ ರಜತ ಉಳ್ಳಾಗಡ್ಡಿಮಠ ಹೀಗೆ ಹೇಳುತ್ತಿದ್ದಾರೆಂದು ಗಿರೀಶ ಗದಿಗೆಪ್ಪಗೌಡರ್ ತಮ್ಮ ಅಸಮಾಧಾನವನನು ಬಹಿರಂಗವಾಗಿಯೇ ತೋಡಿಕೊಂಡಿದ್ದಾರೆ.
ಈ ಮಾತನ್ನು ಕೇಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ದಂಗು ಬಡಿದಿದ್ದಾರೆ. ಸಾಗರ ಹಿರೇಮನಿ ಎಂಬುವವರನ್ನು ಯಾವ ಕಾರಣಕ್ಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಸಲಾಗಿದೆ. ಇದು ಸರಿಯಲ್ಲ. ಮಾತೆತ್ತಿದರೆ ರಜತ ಉಳ್ಳಾಗಡಿಮಠ ಅವರು ತನ್ನ ಒಂದು ಪಾಕೆಟ್‌ನಲ್ಲಿ ಡಿ.ಕೆ. ಶಿವಕುಮಾರ ಇನ್ನೊಂದು ಪಾಕೆಟ್‌ನಲ್ಲಿ ಲಕ್ಷ್ಮೀ ಹೆಬ್ಬಾಳಕರ ಇದ್ದಾರೆಂದು ಹೇಳುತ್ತಿದ್ದಾರೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯ ೨೫ ವಾರ್ಡುಗಳ ಟಿಕೆಟ್‌ಗಳು ನನ್ನ ಕಿಸೆಯಲ್ಲಿವೇ ಎಂದು ಹೇಳೊಕೊಂಡು ಓಡಾಡುತ್ತಿದ್ದಾರೆ ಎಂದು ನೇರವಾಗಿ ಹರಿಹಾಯ್ದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ