ಜನಾಶೀರ್ವಾದ ಯಾತ್ರೆ: ಆ. 16 ರಿಂದ 43 ಹೊಸ ಕೇಂದ್ರ ಸಚಿವರಿಂದ ತಲಾ 400 ಕಿಮೀ ಪ್ರಯಾಣ..!

ನವದೆಹಲಿ: ಬಿಜೆಪಿಯು 43 ಸಚಿವರುಗಳನ್ನು 19 ರಾಜ್ಯಗಳಲ್ಲಿ ಆಗಸ್ಟ್ 16 ರಿಂದ ಆರಂಭವಾಗುವ ಮೂರು ದಿನಗಳ ಸುದೀರ್ಘ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ಸಾಮಾನ್ಯ ಜನರಿಗೆ ಪರಿಚಯಿಸಲಿದೆ.
ನ್ಯೂಸ್ 18 ಈ ಬಗ್ಗೆ ವರದಿ ಪ್ರಕಟಿಸಿದೆ. ಈ ಜನ ಆಶೀರ್ವಾದ ಯಾತ್ರೆಯಡಿಯಲ್ಲಿ 43 ಸಚಿವರು ಪ್ರತಿಯೊಬ್ಬರೂ ದೆಹಲಿಯಿಂದ ತೆರಳಿ ತಮ್ಮ ತವರು ಕ್ಷೇತ್ರದಿಂದ ಸುಮಾರು 300-400 ಕಿಲೋಮೀಟರ್ ದೂರದಲ್ಲಿ ಇಳಿಯಲಿದ್ದಾರೆ. ಬಳಿಕ ಮುಂದಿನ ಮೂರು ದಿನಗಳಲ್ಲಿ ತೆರೆದ ವಾಹನದಲ್ಲಿ ಮೂರು ನಾಲ್ಕು ಲೋಕಸಭಾ ಕ್ಷೇತ್ರಗಳ ಮೂಲಕ ಹಾದುಹೋಗುತ್ತಾರೆ. ಬಿಜೆಪಿಯು ಸುಮಾರು 150 ಲೋಕಸಭಾ ಕ್ಷೇತ್ರಗಳನ್ನು ಮತ್ತು 15,000 ಕಿ.ಮೀ.ಗಳಲ್ಲಿ ತನ್ನ ಆಶೀರ್ವಾದ ಯಾತ್ರೆ ನಡೆಸಲು ಯೋಜಿಸಿದೆ. ಮತ್ತು ಇದು ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ಮುಂದಿನ ಚುನಾವಣೆಯ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಸಚಿವರುಗಳು ಹಳ್ಳಿಗಳಲ್ಲಿ ಅಥವಾ ಸಣ್ಣ ಪಟ್ಟಣಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತಾರೆ. ಬಳಿಕ ಮೂರು ದಿನಗಳ ಪ್ರಯಾಣದಲ್ಲಿ ಪ್ರಮುಖ ಧಾರ್ಮಿಕ ಸಂತರು, ಸಾಮಾಜಿಕ ಕಾರ್ಯಕರ್ತರು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಾಧಕರು, ಹುತಾತ್ಮರ ಕುಟುಂಬಗಳು, ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತ್ತಾರೆ ಎಂದು ವರದಿ ಹೇಳಿದೆ.
ಜನ ಆಶೀರ್ವಾದ ಯಾತ್ರೆ ತಮ್ಮ ಪ್ರದೇಶದ ಮೂಲಕ ಹಾದುಹೋಗುವಾಗ ಅಂದರೆ ಆಗಸ್ಟ್ 16 ರಿಂದ ಎಲ್ಲಾ ಬಿಜೆಪಿ ಸಂಸದರು ಕೂಡ ತಮ್ಮ ಕ್ಷೇತ್ರದಲ್ಲಿ ಇರಬೇಕೆಂದು ಈಗಾಗಲೇ ಬಿಜೆಪಿ ಪಕ್ಷವು ಸೂಚಿಸಿದೆ.ಪ್ರತಿಯೊಬ್ಬ ಸಚಿವರು ಜನರೊಂದಿಗೆ ಸಂಪರ್ಕ ಹೊಂದಿರಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯಸುತ್ತಾರೆ. ಹಾಗೆಯೇ ಸಾರ್ವಜನಿಕರೂ ಸಹ ಸಚಿವರುಗಳೊಂದಿಗೆ ಸಂಪರ್ಕವನ್ನು ಈ ಜನ ಆಶೀರ್ವಾದ ಯಾತ್ರೆ ಮೂಲಕ ಪಡೆಯಬಹುದಾಗಿದೆ ಎಂದು ಪಕ್ಷದ ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿ ಪಕ್ಷವು ಜನ ಆಶೀರ್ವಾದ ಯಾತ್ರೆಯ ಮೂಲಕ, ಸಾರ್ವಜನಿಕರಲ್ಲಿ ಸಂದೇಶವನ್ನು ಬಲಪಡಿಸುತ್ತದೆ ಮತ್ತು ಸಾರ್ವಜನಿಕರ ಆಶೀರ್ವಾದವನ್ನು ಪಡೆಯುತ್ತದೆ ಎಂದು ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement