ಮಾಜಿ ಸಿಎಂ ಉತ್ತರ ಕನ್ನಡ ಜಿಲ್ಲೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಆ.೧ರಂದು ಭೇಟಿ ನೀಡಲಿದ್ದಾರೆ.
ಆ.೧ರಂದು ಮಧ್ಯಾಹ್ನ ೩ ಗಂಟೆಗೆ ಬೆಂಗಳೂರಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿ ರಾತ್ರಿ ೮ ಗಂಟೆಗೆ ಕಾರವಾರ ತಲುಪಲಿದ್ದಾರೆ. ಅಂದು ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ಆ.೨ರಂದು ಬೆಳಿಗ್ಗೆ ೮.೩೦ರಿಂದ ೯ ಗಂಟೆ ವರೆಗೆ ಕದ್ರಾ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ಕದ್ರಾ ಸಭಾಂಗಣದಲ್ಲಿ ಹಣಕೋಣದಿಂದ ಕದ್ರಾವರೆಗಿನ ನೆರೆ ಪೀಡಿತ ಜನರ ಅಹವಾಲು ಸ್ವೀಕಾರ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ಬೆಳಿಗ್ಗೆ ೧೦ ರಿಂದ ೧೦.೪೫ರ ವರೆಗೆ ಮಲ್ಲಾಪುರ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ೧೧.೩೦ಕ್ಕೆ ಮಲ್ಲಾಪುರ ಪಂಚಾಯತಿ ಸಭಾಂಗಣದಲ್ಲಿ ಸಂತ್ರಸ್ತರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ೧೧.೪೫ರಿಂದ ೧೨.೩೦ರವರೆಗೆ ಎನ್‌ಪಿಸಿಐಎಲ್ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಲಿದ್ದಾರೆ. ೨ ಗಂಟೆಗೆ ಅಂಕೋಲಾಕ್ಕೆ ಭೇಟಿ ನೀಡಲಿದ್ದಾರೆ. ೨.೩೦ರಿಂದ ೩.೩೦ರವರೆಗೆ ಅಂಕೋಲಾ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ೩.೩೦ರಿಂದ ೪ರ ವರೆಗೆ ಅಂಕೋಲಾದಲ್ಲಿ ಸಂತ್ರಸ್ತರ ಅಹವಾಲು ಸ್ವೀಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ಸಂಜೆ ೪.೪೫ಕ್ಕೆ ಕೊಚ್ಚಿ ಹೋಗಿರುವ ಹಳವಳ್ಳಿ ಸೇತುವೆ ವೀಕ್ಷಣೆ, ಸಂಜೆ ಹುಬ್ಬಳ್ಳಿಗೆ ಮರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ: ಸ್ಕೂಟಿಯಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement