ಶೇ.10 ರಷ್ಟು ಕೋವಿಡ್ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಪರಿಗಣಿಸಿ: ರಾಜ್ಯಗಳಿಗೆ ಕೇಂದ್ರ

ನವದೆಹಲಿ: ಭಾರತದ 46 ಜಿಲ್ಲೆಗಳಲ್ಲಿ ಕೋವಿಡ್-19 ಪರೀಕ್ಷೆ ಪಾಸಿಟಿವಿಟಿ ದರ ಶೇ.10 ರಷ್ಟಿದ್ದು, ಈ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಧಿಸುವುದನ್ನು ಪರಿಗಣಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಕೋವಿಡ್-19 ಸೋಂಕು ಹೆಚ್ಚಳ ಅಥವಾ ಪಾಸಿಟಿವಿಟಿ ದರ ಎರಡೂ ಏರಿಕೆಯಾಗುತ್ತಿರುವ 10 ರಾಜ್ಯಗಳ ಕೇಂದ್ರಿತ ಪರಿಶೀಲನೆ ಸಭೆಯ ಬಳಿಕ ಈ ಕೇಂದ್ರ ಸರ್ಕಾರ ಈ ನಿರ್ದೇಶನ ನೀಡಿದೆ.
ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಮಿಜೊರಾಮ್, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶ ಹಾಗೂ ಮಣಿಪುರಗಳಲ್ಲಿ ಶೇ.80 ರಷ್ಟು ಸಕ್ರಿಯ ಪ್ರಕರಣಗಳಿದ್ದು, ರೋಗಿಗಳು ಸಮುದಾಯಕ್ಕೆ ಕೋವಿಡ್-19 ಸೋಂಕನ್ನು ಹರಡದೇ ಇರುವಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ 40,000 ಕೋವಿಡ್-19 ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿರುವುದರಿಂದ ಅಜಾಗರೂಕತೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ಹಾಗೂ ಸೋಂಕು ಪತ್ತೆ ಪರೀಕ್ಷೆ ಹೆಚ್ಚಿಸುವುದಕ್ಕೆ ರಾಜ್ಯಗಳಿಗೆ ಒತ್ತಾಯಿಸಿದ್ದಾರೆ.
53 ಜಿಲ್ಲೆಗಳಲ್ಲಿ ಶೇ.5-10 ರಷ್ಟು ಪಾಸಿಟಿವಿಟಿ ವರದಿಯಾಗುತ್ತಿದ್ದು, ಸಾಂಕ್ರಾಮಿಕ ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ. ರಾಜ್ಯ ಮಟ್ಟದ ಸೆರೋಸರ್ವೆಗಳನ್ನು ನಡೆಸುವುದಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement