ಚಿಕ್ಕಮಗಳೂರು:
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ಬೇಲಿ ತುಳಿದು ಸಾವನ್ನಪ್ಪಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿಯ ಗಾಳಿಪೂಜೆ ಪ್ರದೇಶದ ಕಾಫಿ ತೋಟವೊಂದರಲ್ಲಿ ವಿದ್ಯುತ್ ಪ್ರವಹಿಸಿದ್ದ ಬೇಲಿ ಸ್ಪರ್ಶಿಸಿ ಆನೆ ಸಾವಿಗೀಡಾಗಿದೆ ಎಂದು ಹೇಳಲಾಗಿದೆ.
ತೋಟದಲ್ಲಿ ಬೇಲಿಯ ವಿದ್ಯುತ್ ತಾಗಿ ಗಂಡಾನೆಯೊಂದು ಮೃತಪಟ್ಟಿದ್ದು ತಜ್ಞರು ಅದರ ವಯಸ್ಸು 25 ವರ್ಷ ಎಂದು ಅಂದಾಜಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಅವರು ಮಾಹಿತಿ ನೀಡಿದ್ದು, ಆನೆ ಸಾವು ಸಂಬಂಧ ತನಿಖೆ ನಡೆಯುತ್ತಿದೆ. ಭದ್ರಾ ವನ್ಯಜೀವಿ ವಿಭಾಗದ ಡಾ.ಯಶಸ್ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಿಮ್ಮ ಕಾಮೆಂಟ್ ಬರೆಯಿರಿ