ಸರ್ಕಾರದ ವಿರುದ್ಧ ರುಪ್ಸಾ ಅತೃಪ್ತಿ: ನಾಳೆಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ನಿರ್ಧಾರ..?

posted in: ರಾಜ್ಯ | 0

ಬೆಂಗಳೂರು: ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಸೂಚಿಸಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿರುದ್ಧ ಸಮಾಧಾನಗೊಂಡಿದ್ದು,  ಸರ್ಕಾರ ಅನುಮತಿ ನೀಡದಿದ್ದರೂ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಆಗಸ್ಟ್ ೨ ರಿಂದಲೇ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ.

ರಾಜ್ಯ ಸರಕಾರ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಶಾಲೆಗಳನ್ನು ಆರಂಭಿಸದಂತೆ ಸೂಚಿಸಿ ಎಲ್ಲ ಶಾಲೆಗಳನ್ನು ಬಂದ್ ಮಾಡಿತ್ತು. ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಬಂದ್ ಮಾಡಲಾಗಿದ್ದ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಶಾಲೆಗಳನ್ನು ತೆರೆಯಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿವೆ. ಶಾಲೆಗಳನ್ನು ತೆರೆಯುವ ಬಗ್ಗೆ ಜುಲೈ ೩೧ರೊಳಗೆ ಸರ್ಕಾರ ನಿರ್ಧರಿಸಬೇಕು, ಇಲ್ಲದಿದ್ದರೆ ಆಗಸ್ಟ್ ೨ರಿಂದ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಒಕ್ಕೂಟ ತಿಳಿಸಿತ್ತು.  ಅದರಂತೆ ನಾಳೆಯಿಂದ ಶಾಲೆಗಳನ್ನು ತೆರೆಯಲು ರುಪ್ಸಾ ಸಂಘಟನೆ ನಿರ್ಧರಿಸಿದೆ.

ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಸೂಚಿಸಿಲ್ಲವೆಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿರುದ್ಧ  ಸಿಡಿದೆದ್ದಿವೆ. ಸರ್ಕಾರ ಅನುಮತಿ ನೀಡದಿದ್ದರೂ ಖಾಸಗಿ ಶಾಲೆಗಳ ಒಕ್ಕೂಟ ಶಾಲೆ ಆರಂಭಕ್ಕೆ ಮುಂದಾಗಿದೆ. ಶಾಲೆ ಆರಂಭಿಸಲು ರುಪ್ಸಾ ಸಂಘಟನೆ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಶಿಕ್ಷಣ ಇಲಾಖೆಗೆ ಜುಲೈ ೩೧ರ ವರೆಗೆ ಡೆಡ್ ಲೈನ್ ನೀಡಿದ್ದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

ಯಡಿಯೂರಪ್ಪ ರಾಜೀನಾಮೆ, ನೂತನ ಸಿಎಂ ಆಯ್ಕೆ ಗೊಂದಲದಿಂದಾಗಿ ಸರ್ಕಾರದಿಂದ ಶಾಲೆ ಆರಂಭಕ್ಕೆ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೀಗಾಗಿ ನಾಳೆಯಿಂದ ಶಾಲೆ ಆರಂಭಕ್ಕೆ ರುಪ್ಸಾ ಸಂಘಟನೆ ಮುಂದಾಗಿದೆ. ಸರಕಾರ ಇದಕ್ಕೆ ಯಾವ ರೀತಿ ಸ್ಪಂದಿಸಲಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಗಳೇನು ಎಂಬುದನ್ನು ಸರಕಾರ ಇಂದೇ ನಿರ್ಧರಿಸಬೇಕಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement