ಟೋಕಿಯೋ : ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ.
ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ 5-2ರ ಅಂತರದಲ್ಲಿ ಸೋಲನುಭವಿಸುವ ಮೂಲಕ ಟೀಂ ಇಂಡಿಯಾದ ಫೈನಲ್‌ಗೆ ಹೋಗುವ ಆಸೆ ಭಗ್ನಗೊಂಡಿದೆ. ಇದೀಗ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಾಗಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಆಟದ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದ ಟೀಂ ಇಂಡಿಯಾ ಹಾಕಿ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಆರಂಭಿಕ ಹಂತದಲ್ಲಿ ಭಾರತ ತಂಡ ಮೇಲು ಗೈ ಸಾಧಿಸಿತ್ತು. ಭಾರತದ ಹರ್ಮನ್ ಪ್ರೀತ್ ಹಾಗೂ ಮಂದೀಪ್ ಸಿಂಗ್ ಗೋಲ್ ಬಾರಿಸುವ ಮೂಲಕ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟಿದ್ದರು.
ಆದರೆ ಪೆನಾಲ್ಟಿ ಕಾರ್ನರ್ ಲಾಭ ಪಡೆದ ಬೆಲ್ಜಿಯಂ ಪರ ಅಲೆಕ್ಯಾಂಡರ್ ಹ್ಯಾಂಡ್ರಿಕ್ಸ್ ಭರ್ಜರಿ ಗೋಲು ಬಾರಿಸುವ ಮೂಲಕ ಅಂತರವನ್ನು 2-2ರಿಂದ ಸಮಬಲ ಮಾಡಿದರು. ಆದರೆ ಭಾರತಕ್ಕೆ ಮೂರನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಲಾಭ ಸಿಕ್ಕಿದರೂ ಅದು ಗೋಲಾಗಿ ಪರಿವರ್ತನೆಯಅಗಲಿಲ್ಲ. ನಂತರದಲ್ಲಿ ಬೆಲ್ಜಿಯಂ ಸತತ ಗೋಲು ಗಳ ಮೂಲಕ ಪಂದ್ಯ ತನ್ನದಾಗಿಸಿಕೊಂಡಿತು.
2012ರ ಲಂಡನ್ ಒಲಿಂಪಿಕ್ಸ್ ಹಾಗೂ 2016ರ ರಿಯೋ ಒಲಿಂಪಿಕ್ಸ್ ನಲ್ಲಿಯೂ ಭಾರತ ಬೆಲ್ಜಿಯಂ ವಿರುದ್ದವೇ ಸೋಲು ಅನುಭವಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ