ಬೊಮ್ಮಾಯಿ ಮಂತ್ರಿಮಂಡಲ ರಚನೆ: 8 ಹಿರಿಯ ಶಾಸಕರಿಗೆ ಕೊಕ್​..ಯುವ ಮುಖಗಳಿಗೆ ಮಣೆ..?!

ಬೆಂಗಳೂರು: ಭಾನುವಾರ ರಾತ್ರಿ ಬಿಜೆಪಿ ಹೈಕಮಾಂಡ್​ ಆದೇಶದ ಮೇರೆಗೆ ದೆಹಲಿಗೆ ದಿಢೀರ್‌ ಪ್ರಯಾಣ ಬೆಳೆಸಿದ್ದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸೋಮವಾರ ರಾತ್ರಿ ಮೋತಿಲಾಲ್​ ರಸ್ತೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಮನೆಗೆ ಸಂಭಾವ್ಯ ಸಚಿವರ ಪಟ್ಟಿ ಹಿಡಿಡುಕೊಂಡು ಹೋಗಿ ಚರ್ಚೆ ನಡೆಸಿದ್ದರು.
ಮಂಗಳವಾರ ಸಂಪುಟ ಪಟ್ಟಿ ಅಂತಿಮಗೊಳಿಸಿಕೊಂಡೇ ತವರಿಗೆ ಮರಳಲು ನಿರ್ಧರಿಸಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದ ಬೊಮ್ಮಾಯಿ, ಹೈಕಮಾಂಡ್​ ಹೇಳಿದ ತಿದ್ದುಪಡಿಗಳ ಜೊತೆಗೆ ಕೇಂದ್ರ ನಾಯಕರಿಗೆ ಒಲವಿರುವ ಒಂದಷ್ಟು ಮಂದಿಯನ್ನು ಸಚಿವರ ಪಟ್ಟಿಯಲ್ಲಿ ಸೇರಿಸಿ, ಅದಕ್ಕೆ ಒಪ್ಪಿಗೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.,  ಗುರುವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎರಡು ದಿನ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬೊಮ್ಮಾಯಿ ನೂತನ ಸಚಿವರ ಪಟ್ಟಿಯೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಅಮಿತ್ ಶಾ ಭೇಟಿಗೆ ತೆರಳಿದ ಬೊಮ್ಮಾಯಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಸೂಚನೆ ಮೇರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಲು ಸಂಸತ್ ಭವನಕ್ಕೆ ಬೊಮ್ಮಾಯಿ ತೆರಳಿದ್ದು, ಅಮಿತ್ ಶಾ ಭೇಟಿ ಬಳಿಕ ಬುಧವಾರ ಆಗಮಿಸುವ ಸಾಧ್ಯತೆ ಇದೆ.  ಅಧಿವೇಶನ ನಡೆಯುತ್ತಿರುವ ಕಾರಣ ಸಂಸತ್​ ಭವನದ ಬಳಿ ಭೇಟಿ ಮಾಡಿ ಪ್ರಸ್ತುತ ನಡೆದ ಎಲ್ಲಾ ಬೆಳವಣಿಗೆಗಳನ್ನು ವಿವರಿಸಲಿದ್ದು ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
8 ಜನ ಹಿರಿಯ ಶಾಸಕರಿಗೆ ನೂತನ ಮಂತ್ರಿ ಮಂಡಲದಿಂದ ಕೊಕ್..‌
ಶ್ರೀನಿವಾಸ ಪೂಜಾರಿ, ಲಕ್ಷಣ ಸವದಿ, ಈಶ್ವರಪ್ಪ . ಸೋಮಣ್ಣ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಭೀತಿ ಎದುರಾಗಿದ್ದು, ಡಿಸಿಎಂ ಸ್ಥಾನ ಕಳೆದುಕೊಂಡರೂ ಸಚಿವ ಸ್ಥಾನ ತಪ್ಪುವ ಭೀತಿ ಎದುರಾಗಿದ್ದು, ಆದರೆ ಸಚಿವರಾಗಿ ಮುಂದುವರಿಯುವ ಸಾಧ್ಯತೆಯಿದೆ. ಆರ್. ಶಂಕರ್, ಪ್ರಭು ಚೌಹಾಣ್ ಅವರಿಗೂ ಕೈತಪ್ಪಲಿದೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement