ಗಸ್ತುತಂಡದ ಮೇಲೆ ಉಗ್ರರ ದಾಳಿ: ಕಲಬುರಗಿ ಯೋಧ ಸೇರಿ ಇಬ್ಬರು ಹುತಾತ್ಮ

ಕಲಬುರಗಿ: ತ್ರಿಪುರದ ಧಲೈ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ರಾಜ್ಯದ ಕಲಬುರಗಿ ಜಿಲ್ಲೆಯ ಓರ್ವ ಸೈನಿಕ ಸೇರಿ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ಯೋಧ ರಾಜಕುಮಾರ ಎಂ. ಮಾವಿನ್ ಎಂಬ ಯೋಧ ಈ ಘಟನೆಯಲ್ಲಿ ಹುತಾತ್ಮನಾಗಿದ್ದಾರೆ. ಸಬ್​​ಇನ್​​​ಸ್ಪೆಕ್ಟರ್​ ಭುರು ಸಿಂಗ್ ಮತ್ತೋರ್ವ ಹುತಾತ್ಮ ಯೋಧ ಎಂದು ಗುರುತಿಸಲಾಗಿದೆ.
ಬಿಎಸ್ಎಫ್ ಗಸ್ತುತಂಡದ ಮೇಲೆ ಮಂಗಳವಾರ ಬೆಳಿಗ್ಗೆ ನಿಷೇಧಿತ ಸಂಘಟನೆ ನ್ಯಾಷನಲ್ ಲಿಬರಲ್ ಫ್ರಂಟ್ ಆಫ್ ತ್ರಿಪುರಾ (ಎನ್ಎಲ್ಎಫ್ಟಿ)ದ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.
ನಾಳೆ ಸ್ವಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ತರ ಆಕ್ರಂದನ ಮುಗಿಲುಮುಟ್ಟಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ಬೆಳ್ಳಿ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ

ನಿಮ್ಮ ಕಾಮೆಂಟ್ ಬರೆಯಿರಿ

advertisement