
ಟೋಕಿಯೋ ಒಲಿಂಪಿಕ್ಸ್: ಭಾರತದ ಮಹಿಳಾ ಹಾಕಿ ತಂಡವು ಬುಧವಾರ ನಡೆದ ಸೆಮಿಫೈನಲ್ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಗೋಲುಗಳಿಂದ ಸೋತಿದೆ.
ತಮ್ಮ ಮೊದಲ ಒಲಿಂಪಿಕ್ ಕ್ವಾರ್ಟರ್ ಫೈನಲ್ನಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡ ಹಾಗೂ ಮೂರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ದಿಗ್ಭ್ರಮೆಗೊಳಿಸಿದ ಭಾರತ,ಸೆಮಿಫೈನಲ್ ದಿಟ್ಟ ಹೋರಾಟದ ನಡುವೆಯೂ ಪರಾಭವಗೊಂಡಿತು. ಈಗಲೂ ಕಂಚಿನ ಪದಕ ಗೆಲ್ಲು ಅವಕಾಶವಿದ್ದು, ಬ್ರಿಟನ್ ಅನ್ನು ಸೋಲಿಸಬೇಕಿದೆ.
ಗುರ್ಜಿತ್ ಕೌರ್ ಮೊದಲ ಗೋಲು ಹೊಡೆಯುವ ಮೂಲಕ ಭಾರತ ವನಿತೆಯರಿಗೆ ಮುನ್ನಡೆ ನೀಡಿದರು. ಆದರೆ ಅರ್ಜೆಂಟೀನಾ ಕ್ಯಾಪ್ಟನ್ ಮರಿಯಾ ಬ್ಯಾರಿಯೊನ್ಯುವೊ ಗೋಲುಗಳಿಸಿ ವಿಶ್ವ ನಂ .2 ತಂಡಕ್ಕೆ 2-1 ಮುನ್ನಡೆ ನೀಡಿದರು. ಅಂತಿಮವಾಗಿ ಅರ್ಜೆಂಟೀನಾ 2-1 ಗೋಲುಗಳಿಂದ ಜಯಗಳಿಸಿತು. .



ನಿಮ್ಮ ಕಾಮೆಂಟ್ ಬರೆಯಿರಿ