ಗೋಕರ್ಣ ಕೋಟಿತೀರ್ಥದಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿ ಸಾವು

ಗೋಕರ್ಣ: ಇಲ್ಲಿನ ಕೋಟಿ ತೀರ್ಥದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಯೋರ್ವ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಕುಮಟಾ ತಾಲೂಕಿನ ಹೆರವಟ್ಟಾ ನಿವಾಸಿ ದಾಮು ನಾರಾಯಣ ಗೌಡ (37) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕೆಲಸಗಾರನಾಗಿರುವ  ಈತ ಕೋಟಿ ತೀರ್ಥದ ಕಟ್ಟೆಯ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ತೀವ್ರ ಹುಡುಕಾಟದ ನಂತರ ಮೃತ ದೇಹವನ್ನು ಮೇಲೆತ್ತಲಾಗಿದ್ದು ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಮುಂದಿನ ಕಾರ್ಯ ಕೈಗೊಳ್ಳಲಾಗಿದೆ. ಗೋಕರ್ಣ ಪಿ.ಎಸ್.ಐ ನವೀನ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ನಿಮ್ಮ ಕಾಮೆಂಟ್ ಬರೆಯಿರಿ

advertisement