ಸಂಕಷ್ಟದಲ್ಲಿರುವ ನೆರೆ ಸಂತ್ರಸ್ತರಿಗೆ ಅಮೆರಿಕ ಹವ್ಯಕದಿಂದ ನೆರವಿನ ಹಸ್ತ

ಶಿರಸಿ: ಅತಿವೃಷ್ಟಿಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿರುವ, ಉತ್ತರ ಕನ್ನಡದ ಕಳಚೆ ಹಾಗೂ ಇತರ ಪ್ರದೇಶದ ರೈತರ ನೆರವಿಗೆ ಅಮೆರಿಕದ ಹವ್ಯಕ ಅಸೋಸಿಯೇಶನ್ ಮುಂದಾಗಿ ಸ್ವರ್ಣವಲ್ಲೀ ಮಠದ ಮೂಲಕ ನೆರವಿನ ಹಸ್ತ ಚಾಚಿದೆ.
ಈ ಕುರಿತು ಮಾಹಿತಿ ನೀಡಿರುವ, ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೆರಿಕ ಹವ್ಯಕ ಅಸೋಶಿಯನ್, ಭೈರುಂಬೆ ಶಾರದಾಂಬಾ ಶಿಕ್ಷಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೆಸರಿನಲ್ಲಿ ಇರುವ ನವದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ಏಳೂವರೆ ಸಾವಿರ ಡಾಲರ್ ನೆರವು ನೀಡಿದೆ. ಭಾರತದ ರೂಪಾಯಿ ಮೊತ್ತದಲ್ಲಿ ಸುಮಾರು ಐದೂವರೆ ಲಕ್ಷ ರೂ. ಆಗಲಿದ್ದು, ಅಮೆರಿಕ ಹವ್ಯಕ ಸದಸ್ಯರು ಸಂಗ್ರಹಿಸಿ ನೀಡಿದ ದೇಣಿಯಾಗಿದೆ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಅದರಲ್ಲಿಯೂ ಯಲ್ಲಾಪುರ ತಾಲೂಕಿನ ಕಳಚೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ ನೋಡಿದರೆ ಮನ ಕಲಕುವಂತಿದೆ. ಹಾನಿಯ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದಾಗ ನೋವುಂಟಾಗುತ್ತಿದೆ. ಹಾನಿಗೆ ಒಳಗಾದ ಕುಟುಂಬಗಳಿಗೆ ಮಠ ನೆರವಾಗಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ದೇಣಿಗೆಯನ್ನು ಪ್ರವಾಹದ ಸಂಕಷ್ಟದ ನಿವಾರಣೆಗೆ ಬಳಸಿಕೊಳ್ಳಬಹುದು ಎಂದು ಅಮೆರಿಕ ಹವ್ಯಕ ಅಸೋಸಿಯೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement