ಇ-ವೇ ಬಿಲ್‌: ಆಗಸ್ಟ್‌ 15ರಿಂದ ರಿಟರ್ನ್ಸ್‌ ಸಲ್ಲಿಕೆ ಕಡ್ಡಾಯ

 

ನವದೆಹಲಿ: ಈ ವರ್ಷದ ಜೂನ್‌ವರೆಗೆ ಸತತ ಎರಡು ತಿಂಗಳಿಂದ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸದಿದ್ದರೆ ಆಗಸ್ಟ್‌ 15ರ ನಂತರ ಇ-ವೇ ಬಿಲ್‌ ಸೃಷ್ಟಿಸಲು ಸಾಧ್ಯವಾಗುವುದಿಲ್ಲ ಎಂದು ಜಿಎಸ್‌ಟಿಎನ್‌ (ಜಿಎಸ್‌ಟಿ ನೆಟ್‌ವರ್ಕ್) ಹೇಳಿದೆ.
ಬಾಕಿ ಇರುವ ಜಿಎಸ್‌ಟಿ ರಿಟರ್ನ್‌ಗಳನ್ನು ತೆರಿಗೆ ಪಾವತಿದಾರರು ಆಗಸ್ಟ್‌ನಲ್ಲಿ ಸಲ್ಲಿಸುವ ನಿರೀಕ್ಷೆ ಇರುವುದರಿಂದ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಈ ನಿರ್ಧಾರವು ಸಹಾಯ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ರಿಟರ್ನ್ಸ್‌ ಸಲ್ಲಿಸದೇ ಇದ್ದರೂ ಇ-ವೇ ಬಿಲ್‌ ತಡೆಹಿಡಿಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.
ಸರ್ಕಾರವು ಇದೀಗ, ರಿಟರ್ನ್ಸ್‌ ಸಲ್ಲಿಸದವರಿಗೆ ಇ-ವೇ ಬಿಲ್‌ಗಳನ್ನು ಮತ್ತೆ ತಡೆಹಿಡಿಯುವ ನಿರ್ಧಾರಕ್ಕೆ ಬಂದಿದೆ. ಆಗಸ್ಟ್‌ 15ರಿಂದ ಅದು ಜಾರಿಗೆ ಬರಲಿದೆ ಎಂದು ಸಿಬಿಐಸಿ ಹೇಳಿದೆ.
ಜಿಎಸ್‌ಟಿ ವ್ಯವಸ್ಥೆಯಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳಿಗೆ ಇ-ವೇ ಬಿಲ್‌ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಆದರೆ, ಚಿನ್ನಕ್ಕೆ ವಿನಾಯಿತಿ ನೀಡಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement