ಆರು ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು..ಕರ್ನಾಟಕದಲ್ಲಿ 1785 ಜನರಿಗೆ ಹೊಸ ಸೋಂಕು..

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಹೊಸದಾಗಿ 1785 ಜನರಿಗೆ ಕೊರೋನಾ ಸೋಂಕು ದಾಖಲಾಗಿದೆ.ಇದೇ ಸಮಯದಲ್ಲಿ 25 ಸೋಂಕಿತರು ಮೃತಪಟ್ಟಿದ್ದಾರೆ ಹಾಗೂ 1651 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,13,512 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,12,368 ಜನ ಗುಣಮುಖರಾಗಿದ್ದು, 36,705 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕೋವಿಡ್‌ ಸಕಾರಾತ್ಮಕ ದರ ಶೇಕಡ 1.10 ರಷ್ಟು ಇದೆ. ಹಾಗೂ ಒಟು 24,414 ಸಕ್ರಿಯ ಪ್ರಕರಣಗಳು ಇವೆ. 1,61,662 ಪರೀಕ್ಷೆ ನಡೆಸಲಾಗಿದೆ.ಬೆಂಗಳೂರಿನಲ್ಲಿ 414 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. 554 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 5 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 8560 ಸಕ್ರಿಯ ಪ್ರಕರಣಗಳಿವೆ.
ಮುಖ್ಯವಾಗಿ ಬೆಂಗಳೂರು ನಗರ-414, ದಕ್ಷಿಣ ಕನ್ನಡ-337, ಉಡುಪಿ- 134, ಮೈಸೂರು-105 ಹಾಗೂ ಕೊಡಗು-100, ಚಿಕ್ಕಮಗಳೂರು -97  ಕೊರೊನಾ ಸೋಂಕಿ ಪ್ರಕರಣಗಳು ವರದಿಯಾಗಿವೆ. ಈ ಐದು ಜಿಲ್ಲೆಗಳಿಂದಲೇ ಸಾವಿರ ಸಮೀಪದ ಪ್ರಕರನಗಳು ವರದಿಯಾಗಿವೆ.
ಜಿಲ್ಲಾವಾರು ಸಂಪೂರ್ನ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

05-08-2021 HMB Kannada

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement