ಕರ್ನಾಟಕದಲ್ಲಿ ಶುಕ್ರವಾರ 1,805 ಜನರಿಗೆ ಕೊರೊನಾ ಹೊಸ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿನ ಪ್ರಕರಣ ಸಂಖ್ಯೆ ಏರಿಕೆ ಕಾಣುತ್ತಿದೆ. ಇಂದು (ಶುಕ್ರವಾರ) ಹೊಸದಾಗಿ 1805 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ ಸೋಂಕಿನಿಂದಾಗಿ 36 ಜನರು ಮೃತಪಟ್ಟಿದ್ದಾರೆ.
ಇದೇವೇಳೆ ಸೋಂಕಿನಿಂದ ಚೇತರಿಸಿಕೊಂಡು 1854 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ಕಾರಣದಿಂದಾಗಿ ಇಂದಿನಿಂದ ಆಗಸ್ಟ್.16ರವರೆಗೆ ಜಾರಿಗೊಳ್ಳುವಂತೆ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಪ್ಯೂ, ಗಡಿ ಭಾಗಗಳಲ್ಲಿ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 441, ದಕ್ಷಿಣ ಕನ್ನಡ 411, ಹಾಸನ 103, ಮೈಸೂರು 90, ಉಡುಪಿ 153, ಕೊಡಗು 79 ಸೇರಿದಂತೆ ರಾಜ್ಯಾಧ್ಯಂತ ಹೊಸದಾಗಿ 1805 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 29,15,317ಕ್ಕೆ ಏರಿಕೆಯಾಗಿದೆ. ಇವರದಲ್ಲಿ ಇಂದು 1854 ಸೇರಿದಂತೆ ಇದುವರೆಗೆ 28,54,222 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 24,328 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

ಪ್ರಮುಖ ಸುದ್ದಿ :-   ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ?

06-08-2021 HMB Kannada

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement