ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಇನ್ಮುಂದೆ ಹಾಕಿ ದಂತಕತೆ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಎಂದು ಹೆಸರು..!

ನವದೆಹಲಿ : ಕ್ರೀಡಾ ಸಾಧನೆಗಾಗಿ ಭಾರತೀಯ ಕ್ರೀಡಾಪಟುಗಳಿಗೆ ನೀಡುತ್ತಿರುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಮರುನಾಮಕರಣ ಮಾಡಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಭಾರತದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಿಸಿ ಮೇಜರ್ ಧ್ಯಾನ್ ಚಂದ್ ಅವರ ಹೆಸರಿಡುವಂತೆ ಸಾಕಷ್ಟು ಮನವಿಗಳು ಬಂದಿತ್ತು. ಈ ಹಿನ್ನೆಲೆಯಲ್ಲಿ ಹಲವು ಹೆಸರುಗಳ ಕುರಿತು ಚರ್ಚೆಯನ್ನು ನಡೆಸಿ ಅಂತಿಮವಾಗಿ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.
ರಾಹುಲ್‌ ಗಾಂಧಿ ಹೆಸರಿನ ಬದಲು ಮೇಜರ್‌ ಧ್ಯಾನ್‌ಚಂದ್‌ ಅವರ ಹೆಸರು ಇಟ್ಟಿವುದಕ್ಕೆ ಒಂದೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಧ್ಯಾನಚಂದ್‌ ವಿಶ್ವದ ಹಾಕಿ ದಂತ ಕತೆ. ತಮ್ಮ ಜೀವಮಾನದಲ್ಲಿ ಸಾವಿರಕ್ಕೂ ಹೆಚ್ಚು ಗೋಲ ಹೊಡೆದ ಆಟಗಾರ. ಹಾಕಿಯಲ್ಲಿ ಅತಿಹೆಚ್ಚು ಗೋಲು ಹೊಡೆದ ದಾಖಲೆ ಅವರ ಹೆರಿನಲ್ಲಿಯೇ ಇದೆ. ಹೀಗಾಗಿ ಅವರ ಹೆಸರನ್ನು ಖೇಲ್‌ ರತ್ನ ಪುಸ್ಕಾರಕ್ಕೆ ಇಡಬೇಕಂದು ಕಳೆದ ಕೆಲವು ವಷರ್ಗಳಿಂದ ಒತ್ತಾಯವಿತ್ತು. ಅದನ್ನು ಮನ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಈಗ ಅದಕ್ಕೆ ಮೇಜರ್‌ ಧ್ಯಾನಚಂದ್‌ ಖೇಲ್‌ ರತ್ನ ಎಂದು ಮರುನಾಮಕರಣದ ಘೋಷಣೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement