ರಾತ್ರಿ ಕರ್ಫ್ಯೂ ಹಿನ್ನೆಲೆ; ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಬೆಂಗಳೂರು: ಕೊರೊನಾ ಪ್ರಕರಣ ಹೆಚ್ಚಳ ನಿಯಂತ್ರಿಸಲು ಕರ್ನಾಟಕ ರಾಜ್ಯಾದಂತ ರಾತ್ರಿ ಕರ್ಫ್ಯೂ ನಿರ್ಬಂಧ ವಿಧಿಸಲಾಗಿದೆ. ರಾತ್ರಿ ಕರ್ಫ್ಯೂ ಬೆಂಗಳೂರಿಗೆ ಕೂಡ ಅನ್ವಯ ಆಗುವುದರಿಂದ ಇದೀಗ ಮೆಟ್ರೋ ಸಂಚಾರ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.
ಕರ್ಫ್ಯೂ ರಾತ್ರಿ 9ರಿಂದ ಮುಂಜಾನೆ 5ರ ವರೆಗೆಜಾರಿಯಲ್ಲಿರುವುದರಿಂದ ಮೆಟ್ರೋ ಕೊನೆಯ ರೈಲು ರಾತ್ರಿ 9 ಗಂಟೆ ಬದಲಾಗಿ 8 ಗಂಟೆಗೆ ಹೊರಡಲಿದೆ. ಆ ಬಳಿಕ, ಮೆಟ್ರೋ ರೈಲು ಸೇವೆ ಇರುವುದಿಲ್ಲ. ಈ ಬದಲಾವಣೆ ನಾಳೆಯಿಂದ (ಆಗಸ್ಟ್ 7 ರಿಂದ) ಆಗಸ್ಟ್ 16ರ ವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿಸಲಾಗಿದೆ.
ಕೊವಿಡ್ 19 ಹರಡುವುದನ್ನು ತಡೆಯಲು ನಿಯಂತ್ರಣ ಕ್ರಮಗಳ ಆದೇಶದಂತೆ ಆಗಸ್ಟ್ 7 ರಿಂದ ಆಗಸ್ಟ್ 16ರ ವರೆಗೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ಕಾರಣದಿಂದ ಕೊನೆಯ ಮೆಟ್ರೋ ರೈಲು ಸೇವೆಯೂ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 9 ಗಂಟೆಯ ಬದಲು ರಾತ್ರಿ 8 ಗಂಟೆಗೆ ಹೊರಡುತ್ತದೆ. ಈ ಬದಲಾವಣೆಯನ್ನು ಆಗಸ್ಟ್ 7 ರಿಂದ ಜಾರಿಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement