ಕಾಲು ಜಾರಿ ಬಿದ್ದು ಕನ್ನಡದ ಹಿರಿಯ ನಟಿ ಲೀಲಾವತಿಗೆ ಗಾಯ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ಸೊಂಟ ಹಾಗೂ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಲೀಲಾವತಿ ಅವರು ಜಾರಿ ಬಿದ್ದಿದ್ದಾರೆ, ಅವರಿಗೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಅವರಿಗೆ ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಅವರ ಪುತ್ರ ವಿನೋದ್ ರಾಜ್ ಹೇಳಿದ್ದಾರೆ.
ಲೀಲಾವತಿ ಬಚ್ಚಲು ಮನೆಗೆ ಹೋದಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಾಗಿಲನ್ನು ತೆರೆಯಲಾಗದೇ ಸುಮಾರು ಅರ್ಧ, ಮೂಕ್ಕಾಲು ಗಂಟೆ ಬಿದ್ದು ನರಳಾಡಿದ್ದಾರೆ. ಬಳಿಕ ಕಷ್ಟಪಟ್ಟು ಬಾಗಿಲು ತೆರೆದು ನಿಧಾನವಾಗಿ ಹೊರ ಬಂದಿದ್ದಾರೆ ಎಂದು ಘಟನೆ ಕುರಿತಂತೆ ವಿನೋದ್ ರಾಜ್ ಮಾಹಿತಿ ನೀಡಿದ್ದಾರೆ.
83 ವರ್ಷ ವಯಸ್ಸಾಗಿರುವ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಲ್ಲಿಯವರೆಗೂ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಣ್ಣಹಚ್ಚಿದ್ದು, ಕೊನೆಯದಾಗಿ ಪುತ್ರ ವಿನೋದ್ ರಾಜ್ ನಟಿಸಿರುವ ಕನ್ನಡದ ಯಾರದು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement