ಕುಮಟಾ ಬಾಳಿಗಾ ಕಾಲೇಜಿನಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳ: ೭೦೦ ವಿದ್ಯಾರ್ಥಿಗಳಿಗೆ ಲಸಿಕೆ

ಕುಮಟಾ; ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೃಹತ್ ಕೋವಿಡ್ ಲಸಿಕಾ ಮೇಳ ನಡೆಯಿತು.
ಬಾಳಿಗಾ ವಿದ್ಯಾರ್ಥಿಗಳಿಗೆ ಮತ್ತು ತಾಲೂಕಿನ ಸರ್ಕಾರಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಒಟ್ಟು ೭೦೦ ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪದವಿ ಪ್ರಾಚಾರ್ಯ ಡಾ.ಪಿ.ಕೆ.ಭಟ್ಟ ವಿದ್ಯಾಥಿಗಳಿಗೆ ತಿಳಿವಳಿಕೆ ನೀಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಪುನಃ ಮೊದಲಿನಂತೆ ಶಿಕ್ಷಣ ಮುಂದುವರಿಯಲು ಎಲ್ಲ ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆಯುವುದು ಅಗತ್ಯ. ಆರೋಗ್ಯ ಇಲಾಖಾ ಮಾರ್ಗಸೂಚಿಯನ್ನು ಪಾಲಿಸ ಬೇಕು. ಕಾಲೇಜಿನಲ್ಲಿ ಈವರೆಗೆ ನೀಡಿದ ಲಸಿಕೆಯಿಂದ ಯಾವುದೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಹೆದರುವ ಅಗತ್ಯವಿಲ್ಲ ಎಂದು ವಿದ್ಯಾಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಪದವಿ ಪೂರ್ವ ಪಾಚಾರ್ಯರಾದ ವೀಣಾ ಕಾಮತ ಲಸಿಕೆಯನ್ನು ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿಯೇ ಕೆಲವು ಕಾಲ ಪ್ರತ್ಯೇಕವಾಗಿ ಕೂಡ್ರಿಸಿ ಅವರ ಮೇಲೆ ನಿಗಾ ಇರಿಸಿ ಯಾವುದೇ ತೊಂದರೆ ಕಾಣಿಸದೆ ಇರುವುದನ್ನು ಖಚಿತಪಡಿಸಿಕೊಂಡು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದರು.
ಲಸಿಕಾ ಅಭಿಯಾನದಲ್ಲಿ ಸರಕಾರಿ ಆಸ್ಪತ್ರೆ ಆರೋಗ್ಯ ಸಿಬ್ಬಂದಿ ಆರ್.ಜಿ.ನಾಯ್ಕ ಲಸಿಕಾ ಅಭಿಯಾನದ ನೇತೃತ್ವ ವಹಿಸಿದ್ದರು .ಡಾ.ಸೋಮ ಶೇಖರ ಗಾಂವಕರ, ಡಾ.ಪ್ರಕಾಶ ಪಂಡಿತ, ಪ್ರೊ.ಮಾಬ್ಲೇಶ್ವರ ಅಂಬಿಗ,ಆಶಾ ಕಾರ್ಯಕರ್ತರು,ಆರೋಗ್ಯ ಇಲಾಖಾ ಸಿಬ್ಬಂದಿಗಳು ಇತರರು ಲಸಿಕಾ ಅಭಿಯಾನ ಯಶಸ್ಸಿಗೆ ಸಹಕರಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement