ಸೋಮವಾರ ಕರ್ನಾಟಕ ಎಸ್​​ಎಸ್​ಎಲ್​ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: 2020-21ನೇ ಸಾಲಿನ ಎಸ್​​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ (SSLC Result) ಇದೇ ಆಗಸ್ಟ್​​ 9ರಂದು (ಸೋಮವಾರ) ಪ್ರಕಟವಾಗಲಿದೆ ಎಂದು ಶಿಕ್ಷಣ ಇಲಾಖೆ  ತಿಳಿಸಿದೆ ಎಂದು ನ್ಯೂಸ್‌18ಕನ್ನಡ.ಕಾಮ್‌ ವರದಿ ಮಾಡಿದೆ.
.ಮುಖ್ಯಮಂತ್ರಿ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿ ಸಿ ನಾಗೇಶ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾಗಿದ್ದಾರೆ. ನೂತನ ಸಚಿವರೇ ಸೋಮವಾರ ಫಲಿತಾಂಶ ಪ್ರಕಟ ಮಾಡಲಿದ್ದಾರೆ ಎಂದು ಹೇಳಲಾಗಿದೆ
ಈ ಮೊದಲು ಆಗಸ್ಟ್​ 7ರಂದು ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲದ ಕಾರಣ ನಂತರದಲ್ಲಿ ಫಲಿತಾಂಶ ಪ್ರಕಟ ಇನ್ನೆರಡು ದಿನ ವಿಳಂಬ ಆಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದರು.
ಸರ್ಕಾರದಲ್ಲಿ ಆದ ಬೆಳವಣಿಗೆಗಳಿಂದ ನೂತನ ಸಚಿವರ ನೇಮಕಾತಿ ಆದ ಬಳಿಕ ಫಲಿತಾಂಶ ಪ್ರಕಟಕ್ಕೆ ಇಲಾಖೆ ಮುಂದಾಗಲಿದೆ ಎಂಬ ಮಾತು ಕೇಳಿ ಬಂದಿತು. ಮುಖ್ಯಮಂತ್ರಿ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಬಿ ಸಿ ನಾಗೇಶ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವರಾಗಿದ್ದಾರೆ.
ಮೌಲ್ಯಮಾಪನ ಕಾರ್ಯ ಎಲ್ಲ ಮುಗಿದು ಫಲಿತಾಂಶ ಪ್ರಕಟ ಮಾಡಲು ಪ್ರೌಢಶಿಕ್ಷಣ ಪರೀಕ್ಷಾ ‌ಮಂಡಳಿ ತಯಾರಿಯಲ್ಲಿದೆ. ಸೋಮವಾರ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಿಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.
ಆಗಸ್ಟ್​ 10ರೊಳಗೆ ಫಲಿತಾಂಶ ಪ್ರಕಟ ಮಾಡಲಾಗುವುದು ಎಂದು ಹಿಂದಿನ ಶಿಕ್ಷಣ ಸಚಿವ ಸುರೇಶಕುಮಾರ್​ ತಿಳಿಸಿದ್ದರು. ನೂತನ ಸಚಿವರು ಇಂದು ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಅನುಮೋದನೆ ನೀಡಲಿದ್ದು, ಸೋಮವಾರ ಆಗಸ್ಟ್​ 9ರಂದು ಪರೀಕ್ಷೆ ಬರೆದಿದ್ದ 8. 71 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ.
ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ karresults.nic.in. ವೆಬ್​ಸೈಟ್​ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ, examresults.net ಮತ್ತು indiaresults.com ವೆಬ್​ಸೈಟ್​ನಲ್ಲಿ ಕೂಡ ರಿಸಲ್ಟ್​ ನೋಡಬಹುದು.
kseeb.kar.nic.in ಅಥವಾ karresults.nic.in ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಲು

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ವೆಬ್​ಸೈಟ್​ ಓಪನ್ ಮಾಡಿ ನಂತರ ಹೋಂ ಪೇಜ್​ನಲ್ಲಿ ಎಸ್​ಎಸ್​ಎಲ್​ಸಿ ರಿಸಲ್ಟ್​ ಎಂಬ ಆಯ್ಕೆ ಒತ್ತಿ
ನಿಮ್ಮ ಪರೀಕ್ಷೆಯ ರೋಲ್ ನಂಬರ್ ಮತ್ತು ಪೇಜ್​ನಲ್ಲಿ ಕೇಳುವ ಮಾಹಿತಿ ಭರ್ತಿ ಮಾಡಿ.
ಹಾಲ್​ ಟಿಕೆಟ್​ನ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ವೇರಿಫೈ ಮಾಡಿ.
ಆಗ ನಿಮ್ಮ ಪರೀಕ್ಷೆ ಫಲಿತಾಂಶ ಸಿಗುತ್ತದೆ.
ನಂತರ ಆ ಫಲಿತಾಂಶವನ್ನು ಪಿಡಿಎಫ್​ ಫಾರ್ಮಾಟ್​ನಲ್ಲಿಯೇ ಡೌನ್​ಲೋಡ್ ಮಾಡಿಕೊಳ್ಳಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement