ಮಠದ ಜಮೀನಿನಲ್ಲಿ ಪ್ರಾಚೀನ ಕಾಲದ ವಸ್ತುಗಳು ಪತ್ತೆ

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕಣ್ಣೂರು ಗ್ರಾಮದ ಮಕ್ಕಳ ದೇವರ ಮಠದ ಜಮೀನಿನಲ್ಲಿ ಪ್ರಾಚೀನ ಕಾಲದ ವಸ್ತುಗಳು ಪತ್ತೆಯಾಗಿವೆ. ಮಠದ ಜಮೀನಿನಲ್ಲಿರುವ ತೆಂಗಿನ ಸಸಿಗಳಿಗೆ ನೀರಾವರಿ ಪೈಪ್ ಅಳವಡಿಸಲು ಜೆಸಿಬಿ ಮೂಲಕ ಜಮೀನಿನಲ್ಲಿ ಗುಂಡಿ ತೆಗೆಯುತ್ತಿದ್ದಾಗ ಇವು ಸಿಕ್ಕಿವೆ.
ಜೆಸಿಬಿ ಮೂಲಕ ಜಮೀನಿನಲ್ಲಿ ಗುಂಡಿ ತೆಗೆಯುತ್ತಿದ್ದಾಗ ಇದ್ದಕಿದ್ದಂತೆ ಭೂಮಿ ಕುಸಿದು, ಸುಮಾರು ಹತ್ತು ಆಡಿ ಆಳಕ್ಕೆ ಗುಂಡಿ ಕಂಡು ಬಂದಿದೆ. ಆ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ತಾಮ್ರ, ಹಿತ್ತಾಳೆ ಹಾಗೂ ಮಣ್ಣಿನ ವಿವಿಧ ವಸ್ತುಗಳು ಪತ್ತೆಯಾಗಿವೆ.
ಅವುಗಳಲ್ಲಿ ದೀಪಸ್ತಂಭ, ವಿಭೂತಿ ಗಟ್ಟಿ, ತಟ್ಟೆ, ಉಯ್ಯಾಲೆ ಕಂಬ, ಜಾಗಟೆ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ. ಶ್ರೀಮಠದ ಸ್ವಾಮೀಜಿಯೊಬ್ಬರು ಲೋಕಕಲ್ಯಾಣಕ್ಕಾಗಿ ತಪಗೈದು ಜೀವಂತ ಸಮಾಧಿಯಾಗಿರಬಹುದು. ಈ ವೇಳೆ ಈ ವಸ್ತುಗಳನ್ನ ಬಳಸಿರಬಹುದು ಎಂದೂ ಹೇಳಲಾಗುತ್ತಿದೆ.
ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಈಗ ಸಿಕ್ಕಿರುವ ವಸ್ತುಗಳ‌ ಮೇಲೆ ಹಳೆಗನ್ನಡದಲ್ಲಿ‌ ಬರೆಯಲಾಗಿದೆ.
ಮಠದ ಜಮೀನಿನಲ್ಲಿ ಪ್ರಾಚೀನ‌ ಕಾಲದ ವಸ್ತುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಠದ ಮೃತ್ಯುಂಜಯ ಸ್ವಾಮೀಜಿ ಅವರಿಗೂ ಸೂಚನೆ ನೀಡಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವವರೂ ಯಾವುದೇ ವಸ್ತಗಳನ್ನು ಹಾಗೆಯೇ ಇಡುವಂತೆ ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement