ರಾಜ್ಯ ಸರ್ಕಾರದಿಂದ ರೈತರ ಮಕ್ಕಳ ವಾರ್ಷಿಕ ವಿದ್ಯಾರ್ಥಿ ವೇತನ ಪ್ರಕಟ

ಬೆಂಗಳೂರು: ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ ವಾರ್ಷಿಕ ಶಿಷ್ಯವೇತನ ಪ್ರಕಟಿಸಿದೆ. ಕೋರ್ಸ್‍ಗಳಿಗೆ ಅನುಸಾರವಾಗಿ ಶಿಷ್ಯವೇತನದ ಹಣ ನಿಗದಿಪಡಿಸಲಾಗಿದೆ.
ಪಿಯುಸಿ, ಐಟಿಐ, ಡಿಪ್ಲೋಮಾ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 2,500, ವಿದ್ಯಾರ್ಥಿನಿಯರಿಗೆ 3,000 ರೂಪಾಯಿ ಸ್ಕಾಲರ್‍ಶಿಪ್ ಸಿಗಲಿದೆ. ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ 5,000, ವಿದ್ಯಾರ್ಥಿನಿಯರಿಗೆ 5,500 ರೂಪಾಯಿ ಶಿಷ್ಯವೇತನ ಸಿಗಲಿದೆ.
ಎಲ್‍ಎಲ್‍ಬಿ, ಪ್ಯಾರಾ ಮೆಡಿಕಲ್, ನರ್ಸಿಂಗ್ ಹಾಗೂ ಬಿ ಫಾರ್ಮಾ ಕೋರ್ಸುಗಳ ವಿದ್ಯಾರ್ಥಿಗಳಿಗೆ 7,500, ವಿದ್ಯಾರ್ಥಿನಿಯರಿಗೆ 8,000 ರೂ.ಗಳ ವಿದ್ಯಾರ್ಥಿ ವೇತನ ಸಿಗಲಿದೆ. ಎಂಬಿಬಿಎಸ್, ಬಿಟೆಕ್, ಬಿಇ ಮತ್ತು ಎಲ್ಲ ಪಿಜಿ ಕೋರ್ಸ್‍ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ವಾರ್ಷಿಕ 10,000, ವಿದ್ಯಾರ್ಥಿನಿಯರಿಗೆ 11,000 ರೂ.ಗಳು ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

ನಿಮ್ಮ ಕಾಮೆಂಟ್ ಬರೆಯಿರಿ

advertisement