ನವದೆಹಲಿ: ಆರ್‌ಎಸ್‌ಎಸ್ ಮೀಸಲಾತಿಯನ್ನು “ಬಲವಾಗಿ ಬೆಂಬಲಿಸುತ್ತದೆ ಎಂದು ಪ್ರತಿಪಾದಿಸಿದ ಸಂಘಟನೆಯ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಒಂದು ನಿರ್ದಿಷ್ಟ ಭಾಗವು “ಅಸಮಾನತೆ ಅನುಭವಿಸುವುದು ಹೋಗುವವರೆಗೂ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ದಲಿತರ ಇತಿಹಾಸವಿಲ್ಲದೆ ಭಾರತದ ಇತಿಹಾಸವು “ಅಪೂರ್ಣ” ಎಂದು ಅಂಡರ್ಲೈನ್ ಮಾಡಿದ ಹೊಸಬಾಳೆ ಅವರು ಸಾಮಾಜಿಕ ಬದಲಾವಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಮಂಗಳವಾರ ಭಾರತ ಪ್ರತಿಷ್ಠಾನವು ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ (Makers Of Modern Dalit History) ಎಂಬ ಪುಸ್ತಕದ ಬಿಡುಗಡೆಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಇತಿಹಾಸವು ದಲಿತರ ಇತಿಹಾಸಕ್ಕಿಂತ ಭಿನ್ನವಾಗಿಲ್ಲ. ಅವರ ಇತಿಹಾಸವಿಲ್ಲದೆ, ಭಾರತದ ಇತಿಹಾಸ ಅಪೂರ್ಣವಾಗಿದೆ ಎಂದು ಹೊಸಬಾಳೆ ಹೇಳಿದರು.
ಮೀಸಲಾತಿಯ ಬಗ್ಗೆ ಮಾತನಾಡಿದ ಹೊಸಬಾಳೆಯವರು, ತಮ್ಮ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು “ಮೀಸಲಾತಿಯನ್ನು ಪ್ರಬಲವಾಗಿ ಬೆಂಬಲಿಸುತ್ತದೆ” ಎಂದು ಸ್ಪಷ್ಟವಾಗಿ ಹೇಳಿದರು.
ಮೀಸಲಾತಿಯನ್ನು “ದೃಢವಾದ ಕ್ರಮ”ದ ಸಾಧನವೆಂದು ವಿವರಿಸಿದ ಅವರು ಮೀಸಲಾತಿ ಮತ್ತು ಸಮನ್ವಯವು (ಸಮಾಜದ ಎಲ್ಲ ವರ್ಗಗಳ ನಡುವೆ) ಜೊತೆಯಾಗಿ ಸಾಗಬೇಕು ಎಂದು ಹೇಳಿದರು.
ಸಾಮಾಜಿಕ ಬದಲಾವಣೆಗೆ ಕಾರಣರಾದ ವ್ಯಕ್ತಿಗಳನ್ನು “ದಲಿತ ನಾಯಕರು” ಎಂದು ಕರೆಯುವುದು ಅನ್ಯಾಯವಾಗಿದೆ. ಏಕೆಂದರೆ ಅವರು ಇಡೀ ಸಮಾಜದ ನಾಯಕರಾಗಿದ್ದಾರೆ. ನಾವು ಸಮಾಜದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಭಾಗಗಳ ವಿವಿಧ ಅಂಶಗಳನ್ನು ಚರ್ಚಿಸಿದಾಗ, ಮೀಸಲಾತಿಯಂತಹ ಕೆಲವು ಅಂಶಗಳು ಏಕರೂಪವಾಗಿ ಮುಂಚೂಣಿಗೆ ಬರುತ್ತವೆ. ವೈಯಕ್ತಿಕವಾಗಿ ನಾನು ಮೀಸಲಾತಿಯನ್ನು ಬೆಂಬಲಿಸುತ್ತೇನೆ. ನಮ್ಮ ಸಂಘಟನೆಯು ಮೀಸಲಾತಿಯನ್ನು ಬಲವಾಗಿ ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು. .
ಆರ್ಎಸ್ಎಸ್ನಲ್ಲಿ 2ನೇ ಸ್ಥಾನದಲ್ಲಿರುವ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ