ಇಂಡಿಯನ್ ಆಯಿಲ್ ಹೊಸ ಎಲ್‌ಪಿಜಿ ಸಂಪರ್ಕಗಳಿಗಾಗಿ ಜಸ್ಟ್‌ ‘ಮಿಸ್ಡ್ ಕಾಲ್’ ಸೌಲಭ್ಯ..!

ಮುಂಬೈ: ಡಿಜಿಟಲ್ ಇಂಡಿಯಾ ಕುರಿತ ಪ್ರಧಾನಮಂತ್ರಿಗಳ ದೃಷ್ಟಿಕೋನ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸೌಲಭ್ಯ ಸುಧಾರಿಸುವ ನಿರಂತರ ಪ್ರಯತ್ನದ ಅಂಗವಾಗಿ ಹೊಸ ಅನಿಲ ಸಂಪರ್ಕ ಪಡೆಯಲು ಮಿಸ್ಡ್ ಕಾಲ್ ಸೌಲಭ್ಯವನ್ನು ಇಂಡಿಯನ್ ಆಯಿಲ್ ಎಲ್ಲ ದೇಶೀಯ ಗ್ರಾಹಕರಿಗೆ ವಿಸ್ತರಿಸಿದೆ.
ಈಗ ದೇಶಾದ್ಯಂತದ ಸಂಭಾವ್ಯ ಗ್ರಾಹಕರು, 8454955555ಗೆ ಮಿಸ್ಡ್ ಕಾಲ್ ನೀಡಿ ಹೊಸ ಸಂಪರ್ಕವನ್ನು ಪಡೆಯಬಹುದಾಗಿದೆ.
ಪ್ರಸ್ತುತ, ತನ್ನ ಹಾಲಿ ಮತ್ತು ಸಂಭಾವ್ಯ ಗ್ರಾಹಕರಿಗೆ ಈ ಸೌಲಭ್ಯ ಒದಗಿಸುತ್ತಿರುವ ಏಕೈಕ ತೈಲ ಮಾರುಕಟ್ಟೆ ಕಂಪನಿ ಇಂಡಿಯನ್ ಆಯಿಲ್ ಆಗಿದೆ. ದೇಶದಾದ್ಯಂತ ಈ ಉಪಕ್ರಮಕ್ಕೆ ಚಾಲನೆ ನೀಡಿದ ಇಂಡಿಯನ್ ಆಯಿಲ್ ಅಧ್ಯಕ್ಷ ಎಸ್.ಎಂ. ವೈದ್ಯ, ಇಂಡಿಯನ್ ಆಯಿಲ್, ಅತ್ಯಂತ ವ್ಯಾಪಕ ಗ್ರಾಹಕರ ಮುಖಾಮುಖಿ ಹೊಂದಿರುವ ಕಂಪನಿಗಳಲ್ಲಿ ಒಂದಾಗಿದೆ ಎಂದರು.
ಇಂಡೇನ್ ಗ್ರಾಹಕರಿಗೆ ನಾವು ನಿರಂತರವಾಗಿ ಹೊಸಬಗೆಯ ಅನುಭವ ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನೂತನ ಸೌಲಭ್ಯಗಳನ್ನು ತಲುಪಿಸಲು ಮತ್ತು ಗ್ರಾಹಕರ ಸಂತೋಷನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ದೇಶಾದ್ಯಂತ ಮರುಪೂರಣದ ಸಿಲಿಂಡರುಗಳಿಗೆ ಬುಕ್ ಮಾಡಲು ಮತ್ತು ಆಯ್ದ ಮಾರುಕಟ್ಟೆಗಳಲ್ಲಿ ಹೊಸ ಸಂಪರ್ಕಕ್ಕೆ ಮಿಸ್ಡ್ ಕಾಲ್ ಸೌಲಭ್ಯವನ್ನು ಜನವರಿಯಲ್ಲಿ ಆರಂಭಿಸಲಾಗಿತ್ತು. ಈಗ ಅದನ್ನು ಎಲ್ಲರಿಗೂ ವಿಸ್ತರಿಸಲಾಗಿದೆ. ತೊಡಕ್ಕಿಲ್ಲದ ಮಿಸ್ಡ್ ಕಾಲ್ ಸೌಲಭ್ಯ ಗ್ರಾಹಕರ ಸಮಯವನ್ನು ಉಳಿಸಿ, ದೇಶದ ಅದರಲ್ಲೂ ಗ್ರಾಮೀಣ ಪ್ರದೇಶದವರಿಗೆ ಹೊಸ ಸಂಪರ್ಕ ಪಡೆಯುವುದನ್ನು ಅನುಕೂಲಕರ ಮತ್ತು ವೆಚ್ಚ ರಹಿತ ನೋಂದಣಿಗೆ ಅವಕಾಶ ನೀಡುತ್ತದೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement