ಎಟಿಎಂನಲ್ಲಿ ದುಡ್ಡಿಲ್ಲದಿದ್ರೆ ಬ್ಯಾಂಕುಗಳು 10 ಸಾವಿರ ರೂ.ದಂಡ ಕಟ್ಬೇಕು ಎಂದ ಆರ್​ಬಿಐ..!

ನವದೆಹಲಿ: ಅಕ್ಟೋಬರ್ ನಿಂದ ಬ್ಯಾಂಕ್​ ಗ್ರಾಹಕರಿಗೆ ಎಟಿಎಂನಲ್ಲಿ ಹಣ ಬರದೇ ವಿಫಲವಾದರೆ ಬ್ಯಾಂಕ್​ ದಂಡ ಪಾವತಿಸಬೇಕಾಗುತ್ತದೆ.
ಎಟಿಎಂ ಒಳಗೆ ಹಣ ಇಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ ವಿಧಿಸುವ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪರಿಚಯಿಸಿದೆ. ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆ ತಪ್ಪಿಸಲು ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದೆ.
ಎಟಿಎಂಗಳ ಮರುಪೂರಣಕ್ಕಾಗಿ ದಂಡದ ಯೋಜನೆ ‘ಎಟಿಎಂಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ನಗದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ ಎಂದು ಆರ್​ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.
ನಗದು ಮುಕ್ತಾಯದ ಕಾರಣದಿಂದಾಗಿ ಎಟಿಎಂಗಳು ಮುಚ್ಚಿ ಹೋಗುತ್ತಿರುವ ಸಮಸ್ಯೆಯನ್ನು ಗಮನಿಸಿದ ಆರ್‌ಬಿಐ, “ಎಟಿಎಂನಲ್ಲಿ ನಗದು ಖಾಲಿಯಾಗಿ ಅದನ್ನು ಸರಿಯಾದ ಸಮಯದಲ್ಲಿ ಬ್ಯಾಂಕ್​ ತುಂಬದೇ ಇರುವ ಕಾರಣ ಅನವಶ್ಯಕವಾಗಿ ಈ ಸಮಸ್ಯೆ ಉಂಟಾಗುತ್ತಿದೆ, ದಕ್ಷತೆಯ ಕೊರತೆಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಈ ದಂಡದ ಯೋಜನೆ ಜಾರಿಗೆ ತರಲಾಗುತ್ತಿದೆ.
ಆರ್‌ಬಿಐ ತನ್ನ ಅಧೀನದ ಬ್ಯಾಂಕುಗಳಿಗೆ ಅಥವಾ ವೈಟ್ ಲೇಬಲ್ ಎಟಿಎಂ ಆಪರೇಟರ್‌ಗಳಿಗೆ (ಡಬ್ಲ್ಯುಎಲ್‌ಎಒ) ತಮ್ಮ ವ್ಯವಸ್ಥೆಯನ್ನು ಬಲಪಡಿಸುವಂತೆ ಸೂಚಿಸಿದೆ. ಎಟಿಎಮ್‌ಗಳಲ್ಲಿ ಹಣ ಸಿಗುತ್ತಿದೆಯೇ ಇಲ್ಲವೇ ಎಂಬುದನ್ನು ಬ್ಯಾಂಕುಗಳು ಮೇಲ್ವಿಚಾರಣೆ ಮಾಡಬೇಕು ಮತ್ತು ಹಣ ಇಲ್ಲದೆ ಉಂಟಾಗುವ ತೊಂದರೆ ತಪ್ಪಿಸಲು ಸಕಾಲಿಕ ಮರುಪೂರಣ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಎಟಿಎಂಗಳಲ್ಲಿ ಹಣ ಲಭ್ಯವಿಲ್ಲದಿದ್ದಲ್ಲಿ 10,000 ರೂ ದಂಡ

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ಎಟಿಎಂಗಳು ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ಹಣವನ್ನು ವಿತರಿಸಲು ವಿಫಲವಾದರೆ, ಪ್ರತಿ ಎಟಿಎಂಗೆ 10,000 ರೂ. ದಂಡ ವಿಧಿಸಲಾಗುತ್ತದೆ. ವೈಟ್ ಲೇಬಲ್ ಎಟಿಎಂಗಳು ನಗದು ಪೂರೈಸುವಲ್ಲಿ ವಿಫಲವಾದರೆ, ಆ ದಂಡವನ್ನು ಬ್ಯಾಂಕಿಗೆ ವಿಧಿಸಲಾಗುವುದು, ಡಬ್ಲ್ಯುಎಲ್‌ಎ ಆಪರೇಟರ್‌ನಿಂದ ಬ್ಯಾಂಕ್ ತನ್ನ ದಂಡವನ್ನು ಹಿಂಪಡೆಯಬಹುದು.
ಎಟಿಎಮ್‌ಗಳಲ್ಲಿ ಹಣ ಅಲಭ್ಯತೆಯ ಸಮಯದಲ್ಲಿ ಸಿಸ್ಟಂ ರಚಿತ ಹೇಳಿಕೆಯನ್ನು ಬ್ಯಾಂಕ್​ಗಳು ಸಲ್ಲಿಸಬೇಕು. ಎಟಿಎಂ ಬರಿದಾದಾಗ ಆಪರೇಟರ್ ಪರವಾಗಿ ಪ್ರತ್ಯೇಕ ಹೇಳಿಕೆಯನ್ನು ಒದಗಿಸಬೇಕಾಗುತ್ತದೆ. ಅಂತಹ ಹೇಳಿಕೆಗಳನ್ನು ಮುಂದಿನ ತಿಂಗಳ ಐದು ದಿನಗಳಲ್ಲಿ ಪ್ರತಿ ತಿಂಗಳು ಸಲ್ಲಿಸಬೇಕು.
ಬ್ಯಾಂಕಿನ ಪ್ರಾದೇಶಿಕ ಕಚೇರಿಗಳ ವಿತರಣಾ ವಿಭಾಗಗಳು ದಂಡ ವಿಧಿಸಬಹುದು. ಪ್ರಾದೇಶಿಕ ಕಚೇರಿಯ ಸಂಚಿಕೆ ವಿಭಾಗದ ಉಸ್ತುವಾರಿ ಹೊಂದಿರುವ ಅಧಿಕಾರಿಯು ಎಟಿಎಂಗಳ ವ್ಯಾಪ್ತಿಯಲ್ಲಿ, ಬ್ಯಾಂಕುಗಳು ಮತ್ತು ಎಟಿಎಂಗಳ ಮೇಲೆ ದಂಡ ವಿಧಿಸಬಹುದು. ದಂಡ ವಿಧಿಸಿದ ದಿನಾಂಕದಿಂದ ಒಂದು ತಿಂಗಳೊಳಗೆ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬ್ಯಾಂಕ್​ಗಳಿಗೆ ಅವಕಾಶವಿರುತ್ತದೆ. ಮೇಲ್ಮನವಿಗಳನ್ನು ಬ್ಯಾಂಕ್ ಅಥವಾ ಡಬ್ಲ್ಯುಎಲ್‌ಒಒಗಳ ನಿಯಂತ್ರಣಕ್ಕೆ ಮೀರಿದ ನೈಜ ಕಾರಣಗಳಿಗಾಗಿ ಮಾತ್ರ ಪರಿಗಣಿಸಲಾಗುತ್ತದೆ, ಎಂದು ಆರ್​ಬಿಐ ಹೇಳಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement