ಕಾಶ್ಮೀರದಲ್ಲಿ ಪಂಡಿತರಿಗೆ ಸೇರಿದ್ದ 9 ಆಸ್ತಿಗಳು ಮಾಲೀಕರಿಗೆ ಹಸ್ತಾಂತರ

ಶ್ರೀನಗರ: ಭಯೋತ್ಪಾದಕರ ದಾಳಿಯಿಂದ ಕಾಶ್ಮೀರದಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
ಭಯೋತ್ಪಾದಕ ಚಟುವಟಿಕೆಗಳಿಂದ ಕಾಶ್ಮೀರದಿಂದ ವಲಸೆ ಹೋಗಿದ್ದ ಹಿಂದೂಗಳನ್ನು ಮರಳಿ ಕರೆತರಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಕುರಿತು ಮಾಹಿತಿ ನೀಡಿದ್ದು, ಜಮ್ಮುಮತ್ತು ಕಾಶ್ಮೀರ ವಲಸೆ ಸ್ಥಿರ ಆಸ್ತಿ (ಸಂರಕ್ಷಣೆ, ಸಂಕಷ್ಟದ ಮಾರಾಟದಿಂದ ರಕ್ಷಣೆ ಹಾಗೂ ನಿರ್ಬಂಧ) ಕಾಯ್ದೆ 1997, ಅಡಿಯಲ್ಲಿ ಜಮ್ಮು-ಕಾಶ್ಮೀರದ ಜಿಲ್ಲೆಗಳಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ವಲಸಿಗರ ಸ್ಥಿರಾಸ್ತಿಗೆ ಕಾನೂನಾತ್ಮಕವಾಗಿ ಪಾಲಕರಾಗಿದ್ದು, ಒತ್ತುವರಿ, ತೆರವು ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಪ್ರಕರಣಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳನ್ನು ವಲಸೆ ಹೋದಿದ್ದವರು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಮೂಲ ಮಾಲೀಕರಿಗೆ ಇಂತಹ 9 ಆಸ್ತಿಗಳನ್ನು ವಾಪಸ್ ನೀಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರದ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಆರ್ಟಿಕಲ್ 370 ರದ್ದು ನಂತರ ಈ ವರೆಗೂ 520 ವಲಸಿಗರು ತಮ್ಮ ತವರಿಗೆ ವಾಪಸ್ಸಾಗಿದ್ದು ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015 ರ ಅಡಿಯಲ್ಲಿ ನೌಕರಿ ಪಡೆದಿದ್ದಾರೆ

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement