ಸಿಬಿಎಸ್‌ಇ 10 ನೇ, 12ನೇ ಕಂಪಾರ್ಟ್‌ಮೆಂಟ್‌ ಪರೀಕ್ಷೆ-2021ರ ದಿನಾಂಕದ ಪಟ್ಟಿ ಬಿಡುಗಡೆ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE ) 10 ಮತ್ತು 12ನೇ ತರಗತಿಯ ಖಾಸಗಿ ವಿದ್ಯಾರ್ಥಿಗಳ ಸುಧಾರಣಾ ಮತ್ತು ಕಂಪಾರ್ಟ್‌ಮೆಂಟ್‌ ಪರೀಕ್ಷೆಗಳಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ವೇಳಾಪಟ್ಟಿಯಂತೆ 10ನೇ ತರಗತಿ ಪರೀಕ್ಷೆಗಳು ಆಗಸ್ಟ್ 25 ರಂದು ಪ್ರಾರಂಭಗೊಂಡು, ಸೆಪ್ಟೆಂಬರ್ 8ಕ್ಕೆ ಮುಕ್ತಾಯಗೊಳ್ಳಲಿದೆ. ಇನ್ನು 12ನೇ ತರಗತಿ ಪರೀಕ್ಷೆ ಆಗಸ್ಟ್ 25ರಂದು ಪ್ರಾರಂಭವಾಗಿ ಸೆಪ್ಟೆಂಬರ್ 15ಕ್ಕೆ ಮುಕ್ತಾಯಗೊಳ್ಳುತ್ತದೆ. ಈ ವೇಳಾಪಟ್ಟಿ ಅಧಿಕೃತ ವೆಬ್ಸೈಟ್ cbse.gov.in. ನಲ್ಲಿ ಲಭ್ಯವಿದೆ.
ಬೆಳಿಗ್ಗೆ 10:30ಕ್ಕೆ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಉತ್ತರ ಪತ್ರಿಕೆಗಳನ್ನ ಬೆಳಿಗ್ಗೆ 10: 00ಕ್ಕೆ ವಿತರಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಗಳನ್ನ ಬೆಳಿಗ್ಗೆ 10:15 ಕ್ಕೆ ವಿತರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಪತ್ರಿಕೆಯನ್ನ ಓದಲು 15 ನಿಮಿಷಗಳನ್ನ ನೀಡಲಾಗುತ್ತದೆ. ಪ್ರತಿ ಪರೀಕ್ಷೆಯ ಅವಧಿಯನ್ನ ಹಾಲ್‌ ಟಿಕೇಟ್‌ನಲ್ಲಿ ಪರೀಕ್ಷೆಯ ಹೆಸರಿನೊಂದಿಗೆ ಉಲ್ಲೇಖಿಸಲಾಗಿದೆ.
ಸುಧಾರಣಾ ಪರೀಕ್ಷೆಗಳಿಗೆ ಹಾಜರಾಗಬಹುದಾದ ಅಭ್ಯರ್ಥಿಗಳ ಅರ್ಹತೆಯನ್ನ ಸಿಬಿಎಸ್ ಇ ಹಂಚಿಕೊಂಡಿದೆ. ಟ್ಯಾಬ್ಯುಲೇಶನ್ ನೀತಿಯ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಅಭ್ಯರ್ಥಿಗಳು. ಪಡೆದ ಅಂಕಗಳಿಂದ ತೃಪ್ತರಾಗದವರು, ಫಲಿತಾಂಶದಲ್ಲಿ ಕಂಪಾರ್ಟ್ ಮೆಂಟ್ ವಿಭಾಗದಲ್ಲಿ ಸ್ಥಾನ ಪಡೆದವರು, ಫಲಿತಾಂಶವನ್ನು ಲೆಕ್ಕಹಾಕಲು ಸಾಧ್ಯವಾಗದ ಅಭ್ಯರ್ಥಿಗಳು ಮತ್ತು ಐದು ಮುಖ್ಯ ವಿಷಯಗಳಿಂದ ಒಂದು ಪೇಪರ್‌ ತೆರವುಗೊಳಿಸದ ಅಭ್ಯರ್ಥಿಗಳು ಈ ಪರೀಕ್ಷೆಗೆ ಆರ್ಹರಾಗುತ್ತಾರೆ.
ಪ್ರವೇಶ ಪತ್ರಗಳನ್ನ ಡೌನ್ ಲೋಡ್ ಮಾಡುವ ದಿನಾಂಕದ ಬಗ್ಗೆ ಶಾಲೆಗಳಿಗೆ ಮಾಹಿತಿ ನೀಡಲಾಗುವುದು ಎಂದು ಸಿಬಿಎಸ್ ಇ ಹೇಳಿದ್ದು, ಕಟ್ಟುನಿಟ್ಟಾದ ಕೋವಿಡ್-19 ಶಿಷ್ಟಾಚಾರಗಳನ್ನ ಅನುಸರಿಸಿ ನಿಯೋಜಿತ ಕೇಂದ್ರಗಳಲ್ಲಿ ಪರೀಕ್ಷೆಗಳನ್ನ ನಡೆಸಲಾಗುತ್ತೆ ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement