ಸಾಮಾನ್ಯ ವಿಮಾ ಮಸೂದೆಗೆ ರಾಜ್ಯಸಭೆ ಅನುಮೋದನೆ

ನವದೆಹಲಿ: ಸಾಮಾನ್ಯ ವಿಮಾ ತಿದ್ದುಪಡಿ ಮಸೂದೆಗೆ (General Insurance Bill) ರಾಜ್ಯಸಭೆ ಬುಧವಾರ ಅಂಗೀಕಾರ ನೀಡಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಸೂದೆ ಮಂಡಿಸಿದರು. ಆದರೆ ಪ್ರತಿಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು.
ಗದ್ದಲದ ಮಧ್ಯೆಯೇ ಹಣಕಾಸು ಸಚಿವರು ಮೂಸದೆಯ ಮಂಡನೆ ಪರವಾಗಿ ಮಾತನಾಡಲು ಆರಂಭಿಸಿದರು.ಆಗ ಸದನದ ಬಾವಿಗಿಳಿದ ಪ್ರತಿಪಕ್ಷಗಳು ಸದಸ್ಯರು ಏರುದನಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್​ ಪಕ್ಷದ ಸದಸ್ಯರು ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸರ್ಕಾರವು ಈ ಮಸೂದೆಗೆ ತರಾತುರಿಯಲ್ಲಿ ಅಂಗೀಕಾರ ಪಡೆದುಕೊಳ್ಳಲು ಯತ್ನಿಸುತ್ತಿದೆ. ಸದನದಲ್ಲಿ ಪಾಲನೆಯಾಗಬೇಕಾದ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸುತ್ತಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿದ ರೀತಿಯಲ್ಲಿಯೇ ಸಾಮಾನ್ಯ ವಿಮಾ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ ಬ್ರಯನ್ ಸದನ ಪ್ರವೇಶಿಸುವ ಮೊದಲು ಹೇಳಿದ್ದರು.
ಆದರೆ ಗದ್ದಲದ ಮಧ್ಯೆಯೇ ಮಸೂದಗೆ ಅಂಗೀಕಾರ ದೊರೆತಿದೆ.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸಾಮಾನ್ಯ ವಿಮಾ ಮಸೂದೆಗೆ ಅಂಗೀಕಾರ ದೊರೆತಿರುವುದರಿಂದ ಸರ್ಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಸರ್ಕಾರ ತನ್ನ ಬಂಡವಾಳವನ್ನು ಗಣನೀಯ ಪ್ರಮಾಣದಲ್ಲಿ ಹಿಂಪಡೆಯಲು ಅವಕಾಶ ಸಿಗುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement