ಕ್ಲೌಡ್ ಕಂಪ್ಯೂಟಿಂಗ್ ಸೇರಿ ಈ ವರ್ಷದಿಂದ 8 ಹೊಸ ಡಿಪ್ಲೊಮಾ ಕೋರ್ಸುಗಳು ಆರಂಭ

ಬೆಂಗಳೂರು: ಈ ಶತಮಾನದ ಬೇಡಿಕೆಗೆ ಅನುಗುಣವಾಗಿ ಎಂಟು ಹೊಸ ಡಿಪ್ಲೋಮಾ ಕೋರ್ಸ್‍ಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮೊದಲ ಬಾರಿಗೆ ಸರ್ಕಾರಿ ಪಾಲಿಟೆಕ್ನಿಕ್‍ಗೆ ಹೊಸ ಲೋಗೊ ಬಿಡುಗಡೆ ಮಾಡಿ ಮಾತನಾಡಿದರು.
ಡಿಪ್ಲೊಮಾದಲ್ಲಿ ಹಾಲಿ 33 ಕೋರ್ಸ್‍ಗಳಿವೆ. ಇವುಗಳ ಜೊತೆಗೆ ಕ್ಲೌಡ್ ಕಂಪ್ಯೂಟಿಂಗ್,ಆಟೋಮೇಷನ್ ಅಂಡ್ ರೋಬೋಟಿಕ್ಸ್, ಆಲ್ಟ್ರನೇಟಿವ್ ಎನರ್ಜಿ ಟೆಕ್ನಾಲಿಜೀಸ್, ಸೈಬರ್ ಸೆಕ್ಯೂರಿಟಿ, ಫುಡ್ ಪ್ರೊಸಸಿಂಗ್ ಅಂಡ್ ರಿಸರ್ವವೇಷನ್, ಟ್ರಾವೆಲ್ ಅಂಡ್ ಟೂರಿಸಂ, ಡೈರೆಕ್ಷನ್ ಸ್ಕ್ರೀನ್ ಪ್ಲೇ, ರೈಟಿಂಗ್ ಅಂಡ್ ಟಿವಿ ಪ್ರೊಡಕ್ಷನ್, ಸೈಬರ್ ಫಿಜಿಕಲ್ ಸಿಸ್ಟಮ್ ಅಂಡ್ ಸೆಕ್ಯೂರಿಟಿ ಎಂಬ ಹೊಸ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಗೌರಿಬಿದನೂರು, ಶಿರಾಳಕೊಪ್ಪ, ಕೂಡ್ಲಗಿ, ರಬಕವಿ, ಬನಹಟ್ಟಿ, ಔರಾದ್, ಬೆಂಗೂರಿನ ಎಸ್.ಜೆ.ಪಾಲಿಟೆಕ್ನಿಕ್, ಚನ್ನಗಿರಿ ಕೊಪ್ಪ ಹೊನ್ನಾಳಿ ಹಾಗೂ ಕಾಪು ಕಾಲೇಜುಗಳಲ್ಲಿ ಈ ಕೋರ್ಸ್‍ಗಳನ್ನು ಪ್ರಾರಂಭಿಸಲಾಗುತ್ತದೆ. 2ನೇ ವರ್ಷದ ಡಿಪ್ಲೊಮಾ ನಂತರ 3ನೇ ವರ್ಷದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ವಿದ್ಯಾರ್ಥಿಗಳು ಡಾಟಾ ಸೈನ್ಸ್, ವಿದ್ಯುತ್ ಇಂಜಿನಿಯರಿಂಗ್ ರಿನ್ಯೂವೆಬಲ್ ಎನರ್ಜಿ, ಇಂಡಸ್ಟ್ರಿಲ್ ಆಟೋಮೇಷನ್ ಅಂಡ್ ಇಂಡಸ್ಟ್ರೀಯಲ್ ಎಲೆಕ್ಟ್ರಲ್ ಇಂಜಿನಿಯರಿಂಗ್ ಮೊದಲಾದ ಕೋರ್ಸ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ರಾಜ್ಯದಲ್ಲಿ 87 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. 26 ಕಾಲೇಜುಗಳಲ್ಲಿ ಮೆರಿಟ್ ಮೇಲೆ ಪ್ರವೇಶ ನೀಡಲಾಗುತ್ತಿದ್ದು, ಉಳಿದ ಕಾಲೇಜುಗಳಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ ಪಠ್ಯಕ್ರಮ ಅನುಸಾರ ಬೋಧನೆ ಮಾಡಲಾಗುವುದು. ಪಠ್ಯಕ್ರಮವನ್ನು ಉದ್ಯಮಿಗಳು, ಶಿಕ್ಷಣ ತಜ್ಞರು, ಹಳೆಯ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಸಿದ್ದಪಡಿಸಲಾಗಿದೆ. ಇದು ಉದ್ಯೋಗ ಮತ್ತು ಉದ್ಯಮಶೀಲತೆ ಎರಡನ್ನೂ ಕಲಿಸುತ್ತದೆ ಎಂದರು.
ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಆರ್. ಮಂಜುನಾಥ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ವೈ.ಎಸ್.ದೊಡ್ಡಮನಿ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement