ಟ್ವಟರಿನಲ್ಲಿ ಫಾಲೋವರ್ಸ್‌: ಮಾಜಿ ಸಿಎಂ ಯಡಿಯೂರಪ್ಪ ದಾಖಲೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಫ್ಯಾನ್ ಫಾಲೋವಿಂಗ್‌ ಹೊಂದಿರುವ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಾಖಲೆ ಮಾಡಿದ್ದಾರೆ. ಅವರು ಟ್ವಟರಿನಲ್ಲಿ ಬರೋಬ್ಬರಿ 10 ಲಕ್ಷ ಹಿಂಬಾಲಕರನ್ನು ಹೊಂದಿರುವ ರಾಜ್ಯದ ಮೊದಲ ರಾಜಕಾರಣಿ ಎಂದು ದಾಖಲೆ ನಿರ್ಮಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರೂ ಅವರನ್ನು ಟ್ವಿಟರ್ ಖಾತೆಯಲ್ಲಿ ಹಿಂಬಾಲಿಸುವವರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ 10 ಲಕ್ಷ ಫಾಲೋವರ್ಸ್‌ ತಲುಪಿದೆ. 10 ಲಕ್ಷ ಫಾಲೋವರ್ಸ್ ಹೊಂದಿದ ರಾಜ್ಯದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಟ್ವಿಟರಿಲ್ಲಿ ನಮ್ಮ ಬಳಗ ದಶಲಕ್ಷದ ಮೈಲಿಗಲ್ಲು ದಾಟಿರುವುದು ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳ ಸಂಕೇತ ಎಂದು ಭಾವಿಸುತ್ತೇನೆ. ತಮ್ಮ ಅಭಿಮಾನದಿಂದ ಸದಾ ನನ್ನನ್ನು ಹಾರೈಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಯಡಿಯೂರಪ್ಪ ಟ್ವೀಟ್ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡ ಅತ್ಯಂತ ಪ್ರಭಾವಿ ರಾಜಕಾರಣಿಗಳಾಗಿದ್ದು, ಇವರಲ್ಲಿ ಅತಿ ಹೆಚ್ಚು ಟ್ವಿಟರ್ ಫಾಲೋವರ್ಸ್ ಹೊಂದಿದವರಲ್ಲಿ ಯಡಿಯೂರಪ್ಪನವರು ಮೊದಲ ಸ್ಥಾನ ಅಲಂಕರಿಸಿದ್ದಾರೆ

ಪ್ರಮುಖ ಸುದ್ದಿ :-   ಏಪ್ರಿಲ್‌ 28, 29 ರಂದು ಉತ್ತರ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರ : ಬೆಳಗಾವಿಯಲ್ಲಿ ತಂಗುವ ಸಾಧ್ಯತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement