ಭಯೋತ್ಪಾದಕ ಚಟುವಟಿಕೆ ಎದುರಿಸಲು ಬೆಂಗಳೂರು ವಿಶೇಷ ತರಬೇತಿ ಪಡೆದ ಸ್ವಾಟ್ ತಂಡ ರೆಡಿ

ಬೆಂಗಳೂರು:ಕರ್ನಾಟಕ ಪೊಲೀಸರು ರಾಜ್ಯದ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ಪರಿಶೀಲಿಸಲು ಬೆಂಗಳೂರಿನಲ್ಲಿ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರ ತಂಡ (Special Weapon and Tactics Team (SWAT)) ರಚಿಸಿದ್ದಾರೆ.
ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು SWAT ತಂಡವು ತುರ್ತು ಪರಿಸ್ಥಿತಿಗಳು, ವಿಶೇಷ ಕರ್ತವ್ಯಗಳು, ಭಯೋತ್ಪಾದಕ ಮತ್ತು ನಕ್ಸಲ್ ಚಟುವಟಿಕೆಗಳು, ಸಮಾಜವಿರೋಧಿ ಚಟುವಟಿಕೆಗಳು, ರಾಜ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಮತ್ತು ಭದ್ರತೆಯನ್ನು ಖಚಿತಪಡಿಸುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭದ್ರತೆಗಾಗಿ ಅವರನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ನಕ್ಸಲೀಯರು, ಭಯೋತ್ಪಾದಕರ ದಾಳಿ ಸೇರಿದಂತೆ ಅಹಿತಕರ ಘಟನೆಗಳ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಸ್ವ್ಯಾಟ್ ಪಡೆಗಳಿಗೆ ಅತ್ಯಾಧುನಿಕ ತರಬೇತಿ ನೀಡಲಾಗಿದೆ.
ಬೆಂಗಳೂರಿನ ಸಿಎಆರ್ ಘಟಕಗಳಿಂದ 8 ಆರ್‍ಎಸ್‍ಐ ಮತ್ತು 120 ಸಿಬ್ಬಂದಿ ಆಯ್ಕೆ ಮಾಡಿಕೊಂಡು ಪ್ರತಿ ತಂಡದಲ್ಲಿ 2 ಆರ್‍ಎಸ್‍ಐ ಮತ್ತು 30 ಸಿಬ್ಬಂದಿ ಒಳಗೊಂಡಂತೆ ನಾಲ್ಕು ತಂಡಗಳನ್ನು ರಚಿಸಲಾಗಿದೆ.
ಮೊದಲ ಹಂತದಲ್ಲಿ 2 ತಂಡಗಳಿಗೆ 8 ವಾರಗಳ ತರಬೇತಿ ನೀಡಲಾಗಿದೆ. ಭಯೋತ್ಪಾದನೆ ಪ್ರತಿಬಂಧಕ ಕೇಂದ್ರ(ಸಿಸಿಟಿ)ದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳ ಭದ್ರತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತರಬೇತಿ ನೀಡಲಾಗಿದೆ. ವಿಶೇಷ ಆಯುಧ ಮತ್ತು ತಂತ್ರಗಾರಿಕೆ( ಸ್ವ್ಯಾಟ್) ಹೆಸರಿನ ಈ ಪಡೆಗಳು ಭಯೋತ್ಪಾದನೆ, ನಕ್ಸಲ್ ಕೃತ್ಯಗಳು, ಸಾಮಾಜಿಕ ವಿರೋಧಿ ಚಟುವಟಿಕೆಗಳಂತಹ ಸೂಕ್ಷ್ಮ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸಲಿವೆ.
ತರಬೇತಿ ಪಡೆದಿರುವ 2 ತಂಡಗಳನ್ನು ನಗರದ ವಿವಿಧ ವಿಭಾಗಗಳಿಗೆ ಅಗತ್ಯಕ್ಕನುಗುಣ ವಾಗಿ ನಿಯೋಜಿಸಲಾಗಿದೆ. ಇವು ಅತಿಸೂಕ್ಷ್ಮ ಸ್ಥಳಗಳಲ್ಲಿ ಮಾಕ್‍ಡ್ರಿಲ್ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಿವೆ. ಇನ್ನೆರಡು ತಂಡಗಳಿಗೆ ಮುಂದಿನ ದಿನಗಳಲ್ಲಿ ತರಬೇತಿ ನೀಡಿ ವಿಶೇಷ ಕರ್ತವ್ಯಗಳಿಗೆ ನಿಯೋಜಿಸುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement