ಸೆಪ್ಟೆಂಬರ್‌ನಿಂದ 1ರಿಂದ 8ನೇ ತರಗತಿ ಆರಂಭಿಸಲು ಚಿಂತನೆ: ಶಿಕ್ಷಣ ಸಚಿವ ನಾಗೇಶ್‌

ಬೆಂಗಳೂರು: 1 ರಿಂದ 8ನೇ ತರಗತಿಗಳನ್ನು ಸೆಪ್ಟಂಬರ್‌ನಿಂದ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.
ಇದೇ 23ರಿಂದ 9ರಿಂದ 12ನೇ ತರಗತಿಗಳು ಆರಂಭವಾಗಲಿದ್ದು, ಆನಂತರ ಇದನ್ನು ಆಧರಿಸಿ ಪರಿಸ್ಥಿತಿ ನೋಡಿಕೊಂಡು 1-8ನೇ ತರಗತಿ ಆರಂಭಿಸಬೇಕು ಎಂದು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಆಗಸ್ಟ್‌ 23 ರಿಂದ ಆರಂಭವಾಗುವ ಭೌತಿಕ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶುಕ್ರವಾರ ವಿಸ್ತೃತ ಎಸ್‌ಒಪಿ (ಪ್ರಮಾಣಿತ ಕಾರ್ಯಚರಣೆ ವಿಧಾನ) ಇಂದು ಬಿಡುಗಡೆ ಮಾಡಲಾಗುವುದು. 1 ರಿಂದ 8 ನೇ ತರಗತಿ ಆರಂಭಿಸಬೇಕು ಎಂಬ ಒತ್ತಡ ಪೋಷಕರಿಂದ ಬರುತ್ತಿದೆ. ಕೋವಿಡ್‌ನಿಂದ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದು ಕೋವಿಡ್‌ ತಾಂತ್ರಿಕ ಸಮಿತಿ ಮತ್ತು ಮಕ್ಕಳ ತಜ್ಞರು ಹೇಳಿದ್ದಾರೆ. ಆದರೂ 9 ರಿಂದ 12 ತರಗತಿಗಳ ಪ್ರತಿಕ್ರಿಯೆ ಗಮನಿಸಿ ತೀರ್ಮಾನ ತೆಗೆದುಕೊಳ್ಳಾಗುವುದು. ಈ ಸಂಬಂಧ ಇದೇ 30 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement