93 ವರ್ಷದ ನಿವೃತ್ತ ವೃದ್ಧನ ಶವ ರೆಫ್ರಿಜರೇಟರ್​​​ನಲ್ಲಿತ್ತು..! ವಿಲಕ್ಷಣ ಘಟನೆಗೆ ಕಾರಣ ?

ಹೈದರಾಬಾದ್​: ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 93 ವರ್ಷದ ವೃದ್ಧರೊಬ್ಬರ ಶವ ರೆಫ್ರಿಜರೇಟರ್​​​ನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮೊಮ್ಮಗ ತನ್ನ ಅಜ್ಜನ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಣವಿಲ್ಲದ ಕಾರಣ ಆತನ ಶವವನ್ನು ಫ್ರಿಜ್​​ನಲ್ಲಿಟ್ಟ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ.
ವಾರಂಗಲ್​ ಜಿಲ್ಲೆ ಪಾರ್ಕಾಲಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ವಾಸನೆ ಬರಲು ಆರಂಭವಾದ ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಆ ಮನೆಗೆ ಬಂದು ತಪಾಸಣೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ರೆಫ್ರಿಜರೇಟರ್​​​ನಲ್ಲಿ ವೃದ್ಧರ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯು ನಿವೃತ್ತ ಉದ್ಯೋಗಿಯಾಗಿದ್ದು, ತನ್ನ ಮೊಮ್ಮಗನ ಜೊತೆ ಆ ಮನೆಯಲ್ಲಿ ವಾಸವಿದ್ದರು. ಇಬ್ಬರಿಗೂ ಆ ವೃದ್ಧ ವ್ಯಕ್ತಿಯ ಪಿಂಚಣಿ ಆಧಾರವಾಗಿತ್ತು. ತಾತ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದೆ ಇತ್ತೀಚೆಗೆ ಕೊನೆಯುಸಿರೆಳೆದಿದ್ದರು.
ಆತನ ಅಂತ್ಯಕ್ರಿಯೆ ನೆರವೇರಿಸಲು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ಹೀಗಅಗಿ ಅನಿವಾರ್ಯವಾಗಿ ನಾನು ತಾತನ ದೇಹವನ್ನು ಬೆಡ್​ಶೀಟ್​​ನಲ್ಲಿ ಸುತ್ತಿ, ರೆಫ್ರಿಜರೇಟರ್​​​ನಲ್ಲಿ ಇಟ್ಟಿದ್ದೆ ಎಂದು ಪೊಲೀಸರ ಸಮ್ಮುಖದಲ್ಲಿ 23 ವರ್ಷ ವಯಸ್ಸಿನ ಮೊಮ್ಮಗ ನಿಖಿಲ್​ ಹೇಳಿದ್ದಾನೆ.
ಮೂರು ದಿನಗಳ ಹಿಂದೆ ವೃದ್ಧ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ತಾತನ ಪಿಂಚಣಿ ಹಣ ನಿಂತುಹೋಗುವ ಭೀತಿಯಿಂದ ಶವವನ್ನು ಮೊಮ್ಮಗ ರೆಫ್ರಿಜರೇಟರ್​​​ನಲ್ಲಿಟ್ಟಿರಬಹುದು ಎಂಬ ಅನುಮಾನದ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| "ನಮಗೆ ಪ್ರತಿಕ್ರಿಯಿಸಲು 30-45 ಸೆಕೆಂಡುಗಳು ಮಾತ್ರ ಸಮಯ ಇತ್ತು": ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ ಬಗ್ಗೆ ಪಾಕ್ ಪ್ರಧಾನಿ ಸಲಹೆಗಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement