ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. 93 ವರ್ಷದ ವೃದ್ಧರೊಬ್ಬರ ಶವ ರೆಫ್ರಿಜರೇಟರ್ನಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಮೊಮ್ಮಗ ತನ್ನ ಅಜ್ಜನ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಹಣವಿಲ್ಲದ ಕಾರಣ ಆತನ ಶವವನ್ನು ಫ್ರಿಜ್ನಲ್ಲಿಟ್ಟ ವಿಲಕ್ಷಣ ಘಟನೆ ನಡೆದ ವರದಿಯಾಗಿದೆ.
ವಾರಂಗಲ್ ಜಿಲ್ಲೆ ಪಾರ್ಕಾಲಾದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ನೆರೆಹೊರೆಯವರು ದುರ್ವಾಸನೆ ಬರಲು ಆರಂಭವಾದ ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಆ ಮನೆಗೆ ಬಂದು ತಪಾಸಣೆ ನಡೆಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರಿಗೆ ರೆಫ್ರಿಜರೇಟರ್ನಲ್ಲಿ ವೃದ್ಧರ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯು ನಿವೃತ್ತ ಉದ್ಯೋಗಿಯಾಗಿದ್ದು, ತನ್ನ ಮೊಮ್ಮಗನ ಜೊತೆ ಆ ಮನೆಯಲ್ಲಿ ವಾಸವಿದ್ದರು. ಇಬ್ಬರಿಗೂ ಆ ವೃದ್ಧ ವ್ಯಕ್ತಿಯ ಪಿಂಚಣಿ ಆಧಾರವಾಗಿತ್ತು. ತಾತ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಾಣದೆ ಇತ್ತೀಚೆಗೆ ಕೊನೆಯುಸಿರೆಳೆದಿದ್ದರು.
ಆತನ ಅಂತ್ಯಕ್ರಿಯೆ ನೆರವೇರಿಸಲು ನನ್ನ ಬಳಿ ಸಾಕಷ್ಟು ಹಣ ಇರಲಿಲ್ಲ. ಹೀಗಅಗಿ ಅನಿವಾರ್ಯವಾಗಿ ನಾನು ತಾತನ ದೇಹವನ್ನು ಬೆಡ್ಶೀಟ್ನಲ್ಲಿ ಸುತ್ತಿ, ರೆಫ್ರಿಜರೇಟರ್ನಲ್ಲಿ ಇಟ್ಟಿದ್ದೆ ಎಂದು ಪೊಲೀಸರ ಸಮ್ಮುಖದಲ್ಲಿ 23 ವರ್ಷ ವಯಸ್ಸಿನ ಮೊಮ್ಮಗ ನಿಖಿಲ್ ಹೇಳಿದ್ದಾನೆ.
ಮೂರು ದಿನಗಳ ಹಿಂದೆ ವೃದ್ಧ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದರೆ ತಾತನ ಪಿಂಚಣಿ ಹಣ ನಿಂತುಹೋಗುವ ಭೀತಿಯಿಂದ ಶವವನ್ನು ಮೊಮ್ಮಗ ರೆಫ್ರಿಜರೇಟರ್ನಲ್ಲಿಟ್ಟಿರಬಹುದು ಎಂಬ ಅನುಮಾನದ ಮೇಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ