ಸೆಪ್ಟೆಂಬರಿನಲ್ಲಿ ಭಾರತದಲ್ಲಿ ಒಂದೇ ಡೋಸ್‌ ಕೋವಿಡ್-19 ಸ್ಪುಟ್ನಿಕ್ ಲೈಟ್ ಲಸಿಕೆ ಲಭ್ಯತೆ ನಿರೀಕ್ಷೆ

ನವದೆಹಲಿ : ಕೋವಿಡ್-19 ವಿರುದ್ಧ ಭಾರತದ ಲಸಿಕೆ ಅಭಿಯಾನವು ಸೆಪ್ಟೆಂಬರ್ ನಲ್ಲಿ ಮತ್ತಷ್ಟು ಬಲ ಪಡೆಯಲಿದೆ. ಯಾಕೆಂದರೆ ಸೆಪ್ಟೆಂಬರ್ ನಲ್ಲಿ ಸ್ಥಳೀಯವಾಗಿ ಓಂದೇ ಡೋಸ್‌ ಕೋವಿಡ್‌ ಲಸಿಕೆ ಸ್ಪುಟ್ನಿಕ್ ಲೈಟ್ ಉತ್ಪಾದನೆ ಪ್ರಾರಂಭವಾಗಲಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದೇಶದ ಔಷಧ ನಿಯಂತ್ರಕ ಡಿಜಿಸಿಐನಿಂದ ತುರ್ತು ಬಳಕೆಯ ದೃಢೀಕರಣವನ್ನು ಕೋರಿ ಪನೇಸಿಯಾ ಬಯೋಟೆಕ್ ಅರ್ಜಿಯನ್ನು ಸಲ್ಲಿಸಿದೆ. ಆರಂಭದಲ್ಲಿ ಸ್ಪುಟ್ನಿಕ್ ಲೈಟ್ ಸೀಮಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ ಎಂದು ವರದಿ ಹೇಳಿದೆ. ಇದರ ಬೆಲೆ ಸುಮಾರು 750 ರೂ.ಗಳಿರಬಹುದು ಎಂದು ನಿರೀಕ್ಷಿಸಲಾಗಿದೆ.
ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಪ್ರಾರಂಭಿಸಲು ಪನೇಸಿಯಾ ಬಯೋಟೆಕ್ ರಷ್ಯಾದ ನೇರ ಹೂಡಿಕೆ ನಿಧಿ (ಆರ್ ಡಿಐಎಫ್) ಪಾಲುದಾರವಾಗಿದೆ. ದೇಶದಲ್ಲಿ ಲಸಿಕೆಯನ್ನು ಉತ್ಪಾದಿಸಲು ಆರ್ ಡಿಐಎಫ್ ಈಗಾಗಲೇ ಡಾ. ರೆಡ್ಡಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಬ್ಬರೂ ವರ್ಷಕ್ಕೆ 100 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸಲು ಒಪ್ಪಿಕೊಂಡಿದ್ದಾರೆ. ಲಸಿಕೆಯು ಏಪ್ರಿಲ್ 12 ರಂದು ದೇಶದಲ್ಲಿ ತುರ್ತು ಬಳಕೆಯ ಅಧಿಕಾರವನ್ನು ಪಡೆಯಿತು ಮತ್ತು ಇದನ್ನು ಮೇ ನಲ್ಲಿ ಜನಸಾಮಾನ್ಯರಿಗೆ ಜಾರಿಗೆ ತರಲಾಯಿತು.
ಭಾರತವಲ್ಲದೆ, 5 ರ ಸ್ಪುಟ್ನಿಕ್ 65 ದೇಶಗಳಲ್ಲಿ ನೋಂದಾಯಿಸಲ್ಪಟ್ಟಿದೆ. ವೈದ್ಯಕೀಯ ಪ್ರಯೋಗಗಳ ಸಮಯದಲ್ಲಿ ಲಸಿಕೆಯು ಶೇಕಡಾ 97.6 ರಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ.
ಆರ್ ಡಿಐಎಫ್ ಪ್ರಕಾರ, ಸ್ಪುಟ್ನಿಕ್ ಲೈಟ್ ಲಸಿಕೆಯನ್ನು ಇತರ ಲಸಿಕೆಗಳ ಸಂಯೋಜನೆಯಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು, ಇದು ಹಲವಾರು ದೇಶಗಳಲ್ಲಿನ ಅಧ್ಯಯನಗಳಿಂದ ಸಾಬೀತಾಗಿದೆ.ಸ್ಪುಟ್ನಿಕ್ ಲೈಟ್ ಕೊರೊನಾ ವೈರಸ್ ಎಲ್ಲ ಹೊಸತಳಿಗಳ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಆರ್ ಡಿಐಎಫ್ ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement