ಮೊಮ್ಮಗ ಸಾವು: ಸಂತಾಪ ಸೂಚಿಸಲು ಬಂದ ನೆರೆಮನೆಯವರ ಮೇಲೆಯೇ ಅಜ್ಜನಿಂದ ಗುಂಡಿನ ದಾಳಿ, 6 ಜನರಿಗೆ ಗಾಯ..!

ಗ್ವಾಲಿಯರ್: ಮೊಮ್ಮಗನ ಸಾವಿಗೆ ಸಂತಾಪ ಸೂಚಿಸಲು ಬಂದಿದ್ದ ನೆರೆಮನೆಯವರ ಮೇಲೆಯೇ ವೃದ್ಧರೊಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬಂದೋಲಿ ಗ್ರಾಮದಲ್ಲಿ ಶನಿವಾರ ನಡೆದ ಬಗ್ಗೆ ವರದಿಯಾಗಿದೆ.
ಪರ್ಮಲ್ ಸಿಂಗ್ ಪರಿಹಾರ್ (60) ಎಂಬಾತನೇ ಗುಂಡಿನ ದಾಳಿ ನಡೆಸಿದ ವ್ಯಕ್ತಿಯಾಗಿದ್ದಾರೆ. ಘಟನೆ ಬಳಿಕ ವ್ಯಕ್ತಿ ನಾಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಪರಿಹಾರ್ ಅವರ ಮೊಮ್ಮಗ ಸಾಹಿಲ್ ಎಂಬಾತ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ. ಬಳಿಕ ಮೃತದೇಹವನ್ನು ಮನೆಗೆ ಕರೆತರಲಾಗಿತ್ತು. ಈ ವೇಳೆ ಸಂತಾಪ ಸೂಚಿಸಲು ನೆರೆಮನೆಯವರು ಮನೆ ಬಳಿ ಬಂದಿದ್ದಾರೆ. ನೆರೆಮನೆಯವರನ್ನು ಮೊದಲಿನಿಂದಲೂ ಶತ್ರುಗಳಂತೆ ಕಾಣುತ್ತಿದ್ದ ಪರಿಹಾರ್, ನರೆ ಮನೆಯವರು ಮನೆ ಬಳಿಯೇ ಬಂದ ಹಿನ್ನೆಲೆಯಲ್ಲಿ ತೀವ್ರವಾಗಿ ಆಕ್ರೋಶಗೊಂಡು ತಮ್ಮ ರೂಮಿಗೆ ತೆರಳಿ, ಪರವಾನಗಿ ಹೊಂದಿದ್ದ ಗನ್ ತೆಗೆದುಕೊಂಡು ಬಂದು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಅಜ್ಮೇರ್ ಸಿಂಗ್, ಕಲ್ಲು ಸಿಂಗ್, ರಾಜೇಂದ್ರ, ಅಶೋಕ್, ದೇವೇಂದ್ರ ಮತ್ತು ವೀರೇಂದ್ರ ಸಿಂಗ್ ಎಂಬುವವರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಗ್ವಾಲಿಯರ್ ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಪರಿಹಾರ್ ಮೊಮ್ಮಗನ ಮೃತದೇಹವನ್ನು ಇದೀಗ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement