ಹು-ಧಾ ಪಾಲಿಕೆ ಚುನಾವಣೆ: ಸಚಿವ ಮುನೇನಕೊಪ್ಪ, ಟೆಂಗಿನಕಾಯಿಗೆ ಬಿಜೆಪಿ ಉಸ್ತುವಾರಿ ಹೊಣೆ, ನಾಳೆ ಕಟೀಲು ಆಗಮನ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲುಸಿದ್ಧತೆ ನಡೆಸಿರುವ ಬಿಜೆಪಿ ಪಾಲಿಕೆಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ.
ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನುಉಸ್ತುವಾರಿಗಳನ್ನಾಗಿ ನೇಮಿಸಿದ್ದು ಸ್ವತಃ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನಾಳೆ ಸಂಜೆ ನಂತರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ಅವರು ಎರಡು ದಿನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಉಸ್ತುವಾರಿ ನಿಯುಕ್ತಿಗೊಂಡರೂ ಅವಳಿನಗರದ ವಿಷಯಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಹಾನಗರ ಅಧ್ಯಕ್ಷ ಅರವಿಂದ ಬೆಲ್ಲದ ಇವರ ಪಅತ್ರಗಳೇ ನಿರ್ಣಾಯಕ. ಹೀಗಾಗಿ ಕೋರ್‌ ಕಮಿಟಿ ಸಭೆಯಲ್ಲೇ ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ.
ಪಾಲಿಕೆಯ ಎಂಬತ್ತೆರಡು ವಾರ್ಡುಗಳಲ್ಲಿ ಬುತೇಕ ವಾರ್ಡುಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು ಯಾರಿಗೆ ಟಿಕೆಎಟ್‌ ನೀಡಬೇಕು ಎಂಬುದು ಸಮಸ್ಯೆಯಾಗಿದೆ. ಆದರೆ ನಾಯಕರು ಸಮೀಕ್ಷೆ ಮಾಡಿಸಿ ಟಿಕೆಟ್‌ ಅಂತಿಮಗೊಳಿಸಲಾಗುವುದು ಎಂದು ಹೇಳುತ್ತಿದ್ದಾರೆ. ಆದರೆ 21ರೊಳಗೆ ಟಿಕೆಟ್‌ ಅಂತಿಮಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.
ಮೂರು ಕ್ಷೇತ್ರಗಳಲ್ಲಿ ಆಯಾ ಶಾಸಕರೇ ಟಿಕೆಟ್ ಹಂಚಿಕೆಯ ಪರಮಾಧಿಕಾರ ಹೊಂದಿದ್ದು, ಪೂರ್ವದಲ್ಲಿ ಯಾರು ಮಾತು ಅಂತಿಮ ಎಂದು ಕಾದುನೋಡೇಕಿದೆ.

ಪ್ರಮುಖ ಸುದ್ದಿ :-   6 ವರ್ಷ ನರೇಂದ್ರ ಮೋದಿ ಅನರ್ಹತೆ : ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement