ಮಹದಾಯಿ ಡಿಪಿಆರ್‌ ತಯಾರಿಗಕೆಗೆ ಅನುಮತಿ ನೀಡುವಂತೆ ಮನವಿ

ಧಾರವಾಡ: ಮಹದಾಯಿ ನೀರಿನ ವಿಷಯದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವಿನ ವ್ಯಾಜ್ಯ ಇರುವುದರಿಂದ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಸದ್ಯ ಡಿಪಿಆರ್ ತಯಾರಿಕೆಗೆ ಅನುಮತಿ ಕೇಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಮೂರು ರಾಜ್ಯಗಳ ನಡುವಿನ ಸೂಕ್ಷ್ಮ ವಿಚಾರ. ಅನಗತ್ಯ ಚರ್ಚೆಗಳಿಂದ ಗೊಂದಲ ಸೃಷ್ಟಿಯಾಗುವುದು ಬೇಡ. ಈ ವಿಷಯದಲ್ಲಿ ಈ ಭಾಗಕ್ಕೆ ಒಳ್ಳೆಯದಾಗಲಿದೆ. ಹೀಗಾಗಿ ಈ ಬಗ್ಗೆ ಎಂದು ಬಗ್ಗೆ ಅನಗತ್ಯ ಯಾವುದೇ ಚರ್ಚೆ ಬೇಡ ಎಂದರು.
ಈಗಾಗಲೇ ಮಹದಾಯಿ ಯೋಜನೆಗೆ ಹಿಂದಿನ ಸರ್ಕಾರ ೧,೬೭೭ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ವಿಸ್ತೃತ ಯೋಜನಾ (ಡಿಪಿಆರ್) ತಯಾರಿಗೆ ಸಿಡಬ್ಲ್ಯುಸಿಗೆ ಅನುಮತಿ ಕೇಳಲಿದ್ದೇವೆ. ಈ ಜವಾಬ್ದಾರಿ ಅರಿತು, ಮೊದಲು ಕಾನೂನಾತ್ಮಕ ವಿಚಾರದ ಕುರಿತಂತೆ ಗಮನ ಹರಿಸುವುದಾಗಿ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement