ಧೋನಿ’ ಭೇಟಿಗಾಗಿ 1400 ಕಿಮೀ ನಡೆದುಕೊಂಡೇ ಬಂದ ಅಭಿಮಾನಿ..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್‌ ಎಂ. ಎಸ್. ಧೋನಿ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿ ಒಂದು ವರ್ಷವಾದರೂ ಧೋನಿ ಕ್ರೇಜ್ ಅಭಿಮಾನಿಗಳಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ.
ಆದರೆ ಇಲ್ಲೊಬ್ಬ ಅಭಿಮಾನಿ ಇದ್ದಾರೆ. ಅವರು ಮಹೇಂದ್ರ ಸಿಂಗ್ ಗಾಗಿ ಬರೋಬ್ಬರಿ 1400 ಕಿಮೀ ನಡೆದುಕೊಂಡ ಬಂದ ಅಪ್ಪಟ ಅಭಿಮಾನಿ.
ಅಚ್ಚರಿ ಎನಿಸಿದರೂ ಇದು ಸತ್ಯ..ಈತನ ಹೆಸರು ಅಜಯ್ ಗಿಲ್ ಎಂದು ಧೋನಿ ಭೇಟಿಯಾಗಲು ಈತ ಹರಿಯಾಣದಿಂದ 1400 ಕಿಮೀ ನಡೆದುಕೊಂಡು ಬಂದು ರಾಂಚಿ ತಲುಪಿದ್ದಾನೆ, ಆಗಸ್ಟ್ 15 ರಂದು ಧೋನಿಯನ್ನು ಭೇಟಿಯಾಗುವ ಉದ್ದೇಶದೊಂದಿಗೆ ಕಾಲ್ನಡಿಗೆ ಶುರು ಮಾಡಿಕೊಂಡಿದ್ದ ಈತ 16 ದಿನಗಳ ಬಳಿಕ 1400 ಕಿಮೀ ಕ್ರಮಿಸಿ ಇಂದು ರಾಂಚಿಗೆ ಬಂದಿದ್ದಾನೆ. ಆದರೆ ಅಜಯ್ ಗೆ ತನ್ನ ನೆಚ್ಚಿನ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಯನ್ನು ಭೇಟಿಯಾಗಲು ಮಾತ್ರ ಸಾಧ್ಯವಾಗಲಿಲ್ಲ, ಅದಾಗಲೇ ಧೋನಿ ಐಪಿಎಲ್ ಗಾಗಿ ಚೆನ್ನೈಗೆ ತೆರಳಿ ಅಲ್ಲಿಂದ ಯುಎಇಗೆ ಪ್ರಯಾಣ ಬೆಳೆಸಿದ್ದರು. ಇದನ್ನು ಗಮನಿಸಿದ ಅನುರಾಗ್ ಚಾವ್ಲಾ ಎನ್ನುವವರು ಮನೆಗೆ ವಾಪಸ್ ಆಗಲು ಟಿಕೆಟ್ ತೆಗೆದುಕೊಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ. ವೃತ್ತಿಯಲ್ಲಿ ಸಲೂನ್ ನಲ್ಲಿ ಕೆಲಸ ಮಾಡುವ ಈತ ಧೋನಿ ಭೇಟಿಗಾಗಿ ಹಂಬಲಿಸಿ ಬದಿದ್ದರು, ಆದರೆ ಅಭಿಮಾನಿಯ ಆಸೆ ಮಾತ್ರ ಈಡೇರಲಿಲ್ಲ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement