ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚುನಾವಣೆ: ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಮ್‌ ಆದ್ಮಿ ಪಕ್ಷ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಢ ಮಹಾನಗರ ಪಾಲಿಕೆ ಚುನಾವಣೆ ಸೆಪ್ಟೆಂಬರ್‌ 3ರಂದು ನಡೆಯಲಿದ್ದು, ಘೋಷಣೆಯಾದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಒಂದನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.ಆ ಮೂಲಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಮೊದಲ ಪಕ್ಷವಾಗಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಕ್ಷದ ರಾಜ್ಯ ಸಹ ಸಂಚಾಲಕರು ಹಾಗೂ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ ಶಾಂತಲಾ ದಾಮ್ಲೆ ಅವರು, ಕಳೆದ ಹಲವಾರು ವರ್ಷಗಳಿಂದ ಭ್ರಷ್ಟ ಆಡಳಿತದ ವಿರುದ್ಧ ಆಪ್ ಹೋರಾಟ ಮಾಡುತ್ತಾ ದೆಹಲಿ ಮಾದರಿಯಲ್ಲಿ ಹು-ಧಾದ ಪ್ರತಿ ವಾರ್ಡ್ ನಲ್ಲಿ ಪಕ್ಷ ಸಂಘಟನೆ ಮಾಡುತ್ತ ಬರಲಾಗಿದೆ, ಪಾಲಿಕೆ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಆನ್ಲೈನ್ ಆಫ್ ಲೈನ್ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ 600 ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ಅವುಗಳನ್ನು ಪರಿಶೀಲಿಸಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.
ಮೊದಲ ಪಟ್ಟಿಯಲ್ಲಿ 12 ನೇ ವಾರ್ಡ್ ಗೆ ಶಿವಕಿರಣ ಅಗಡಿ, 34 ನೇ ವಾರ್ಡ್ ಗೆ ಕಸ್ತೂರಿ ಮುರಗೋಡ, 36 ನೇ ವಾರ್ಡ್ ಗೆ ಮಲ್ಲಿಕಾರ್ಜುನಯ್ಯ ಬಿ ಹಿರೇಮಠ, 38 ನೇ ವಾರ್ಡ್ ಗೆ ಮಲ್ಲಪ್ಪ ತಡಸದ, 46 ನೇ ವಾರ್ಡ್ ಗೆ ದೀಪಿಕಾ ಭಂಡಾರಿಮುಥಾ, 51 ವಾರ್ಡ್ ಗೆ ಲಕ್ಷ್ಮೀ ಎಂ ದೊಡ್ಡಮನಿ, 52 ವಾರ್ಡ್ ಗೆ ಶಾರದಾ ಬಡಿಗೇರ, 54 ನೇ ವಾರ್ಡ್ ಗೆ ಆರತಿ ರ. ನರಗುಂದ, 72 ನೇ ವಾರ್ಡ್ ಗೆ ಪರ್ವೀನ್‌ ಬಾನು ಹಸನ್‌ಸಾಬ್‌ ಇನಾಮದಾರ್‌, 75ನೇ ವಾರ್ಡ್ ನಿಂದ ಬಸವರಾಜೇಶ್ವರಿ ಬುಗಡಿ ಸ್ಪರ್ಧೆ ಮಾಡಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಒಂದೂವರೆ ವರ್ಷದಿಂದ ಮಹಾನಗರ ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದೆವು. ಈ ಅಭಿಯಾನ ಆರಂಭ ಮಾಡಿದಾಗ ಹು-ಧಾ ಮಹಾನಗರ ಪಾಲಿಕೆಗೆ 82 ಯೋಗ್ಯ ಸಮರ್ಥ ಜನಪರ ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಡತ್ತೇನೆ ಎಂದು ಹೇಳಿದ್ದೆವು. ಅದರಂತೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಆಮ್ ಆದ್ಮಿ ಪಕ್ಷ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಕ್ಷ, ಹುಬ್ಬಳ್ಳಿಯ ಪ್ರತಿಯೊಂದು ವಾರ್ಡ್ ನಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಬರುವ ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಸದಸ್ಯ ಬಸವರಾಜ ಮುದ್ದಿಗೌಡರ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement