ಕುಮಟಾ: ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳಿಗೆ ಸನ್ಮಾನ

ಕುಮಟಾ; ಪ್ರಯತ್ನವಿಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿರ ಬೇಕು ಎಂದು ಡಾ.ಎಸ್.ವಿ.ಶೇಣ್ವಿ ಹೇಳಿದರು.
ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಪದವಿ ಮತ್ತು ಪೂರ್ವ ವಿಭಾಗದಲ್ಲಿ ರ್‍ಯಾಂಕ್ ಪಡೆದ ವಿದ್ಯಾಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಆಧುನಿಕ ಕಾಲದಲ್ಲಿ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಳ್ಳ ಬೇಕು.ಕಾಲೇಜಿನ ಇತಿಹಾಸದಲ್ಲೆ ಇಂದಿನ ವಿದ್ಯಾರ್ಥಿಗಳು ಮಾಡಿದ ಸಾಧನೆ ನಿಜಕ್ಕೂ ಕಾಲೇಜಿಗೆ ಹೆಮ್ಮೆಯ ವಿಷಯ ಎಂದರು.
ವಾಣಿಜ್ಯ ಪದವಿ ವಿಭಾಗದಲ್ಲಿ ದೀಪಾ ಭಟ್ಟ ಕನಾಟಕ ವಿಶ್ವವಿದ್ಯಾಲಯ ಧಾರವಾಡದ ಅಡಿಯಲ್ಲಿ ಬರುವ ಪದವಿ ವಿಭಾಗದ ೧೫೭ ಕಾಲೇಜಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ವಾಣಿಜ್ಯ ಅಂತಿಮ ವರ್ಷದಲ್ಲಿ ಶೇ.೯೮.೦೨ ಅಂಕಪಡೆದಿದ್ದು ಸರಾಸರಿಯಲ್ಲಿ ವದವಿಯ ೩೭೦೦ ಅಂಕಗಳಿಗೆ ೩೫೭೦ ಅಂಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಬಾಳಿಗಾ ವಾಣಿಜ್ಯ ಕಾಲೇಜಿನ ಇತಿಹಾಸದಲ್ಲೇ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಬಂದಿದ್ದು ಮೊದಲ ಸಲವಾಗಿದೆ.ಇದು ಕೆನರಾ ಕಾಲೇಜು ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಅವರು ದೀಪಾ ಭಟ್ಟ ಅವರನ್ನು ಶ್ಲಾಘಿಸಿದರು.
ಪದವಿ ಪೂರ್ವ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಾರ್ತಿಕ ಹೆಗಡೆ ಮತ್ತು ಚೇತನಾ ಭಟ್ಟ ೬೦೦ ಅಂಕಗಳಿಗೆ ೬೦೦ ಅಂಕ ಪಡೆದು ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದವರಾಗಿರುತ್ತಾರೆ. ಇವರನ್ನು ಪದವಿ ಪೂರ್ವ ಪ್ರಾಚಾರ್ಯ ಪ್ರೊ.ಎನ್.ಜಿ.ಹೆಗಡೆ ಸನ್ಮಾನಿಸಿ ಅಭಿನಂದಿಸಿದರು.
ವೇದಿಕೆಯಲ್ಲಿ ಡಾ.ಅರವಿಂದ ನಾಯಕ, ಪ್ರೊ.ಸಂತೋಷ ಶ್ಯಾನಭಾಗ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಣವ ಪಂಡಿತ್, ಯೋಗಿನಿ ಭಂಡಾರಕರ ಇದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement