ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್‌ಗೆ ಮತ್ತೆ 25 ರೂ. ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನ್ಕಕೇರುತ್ತಲೇ ಇದೆ. ಸದ್ಯ ಒಂದು ತಿಂಗಳಿನಿಂದ ಪೆಟ್ರೋಲ್​-ಡೀಸೆಲ್​ ಬೆಲೆ ಹೆಚ್ಚಳವಾಗಿಲ್ಲ. ಆದರೆ ಈಗ ಪ್ರ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​(LPG Price Hike) ಬೆಲೆ ಏರಿಕೆಯಾಗಿದೆ.
ಪೆಟ್ರೋಲಿಯಂ ಕಂಪನಿಗಳು ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು 25 ರೂ.ಗಳಷ್ಟು ಹೆಚ್ಚಿಸಿವೆ. ಈಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆ.ಜಿ ಸಿಲಿಂಡರ್​ ಬೆಲೆ 859.50 ರೂ. ಆಗಿದೆ. ಪರಿಷ್ಕೃತ ದರಗಳು ಆಗಸ್ಟ್​ 17ರಿಂದಲೇ ಜಾರಿಯಾಗಿವೆ. ದೇಶದ ಬಹುತೇಕ ನಗರಗಳಲ್ಲಿ ಸಿಲಿಂಡರ್​ ಬೆಲೆ ಏರಿಕೆಯಾಗಿದೆ. ಜುಲೈ 1ರಂದು ಎಲ್​ಪಿಜಿ ಸಿಲಿಂಡರ್​ ಬೆಲೆ 25.50 ರೂಪಾಯಿ ಏರಿಕೆಯಾಗಿತ್ತು.ಈಗ ಮತ್ತೆ ಹೆಚ್ಚಳವಾಗಿದೆ.
ತೈಲ ಕಂಪನಿಗಳು ಸತತ ಎರಡನೇ ತಿಂಗಳೂ ಸಹ ಗೃಹೋಪಯೋಗಿ ಗ್ಯಾಸ್​ ಬೆಲೆಯನ್ನು ಹೆಚ್ಚಿಸಿವೆ. ಜೂನ್​ 1ರಂದು ಎಲ್​ಪಿಜಿ ಸಿಲಿಂಡರ್ ಬೆಲೆ 809 ರೂ. ಇತ್ತು. ಜುಲೈ 1ರಂದು 834 ರೂ.ಗೆ ಏರಿಸಲಾಯಿತು. ಈಗ ಮತ್ತೆ ಹೆಚ್ಚಳವಾಗಿ 859.50 ರೂ.ಗಳಷ್ಟಾಗಿದೆ.
ಜನವರಿ 1ರಿಂದ ಆಗಸ್ಟ್​ 17ರ ನಡುವೆ ಎಲ್​ಪಿಜಿ ಸಿಲಿಂಡರ್​​ ಬೆಲೆ ಬರೋಬ್ಬರಿ 165 ರೂ.ಗಳಷ್ಟು ಹೆಚ್ಚಾಗಿದೆ.

ಪ್ರಮುಖ ಸುದ್ದಿ :-   ವ್ಯಕ್ತಿಯೊಬ್ಬರ ಖಾತೆಗೆ ಜಮೆಯಾಯ್ತು ಬರೋಬ್ಬರಿ 9900 ಕೋಟಿ ರೂ....! ಮುಂದಾಗಿದ್ದೇನು..?

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement