ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ : ಸರ್ಕಾರದ ಕ್ರಮಕ್ಕೆ ಮುತಾಲಿಕ್‌ ತೀವ್ರ ವಿರೋಧ

ಬೆಳಗಾವಿ :ಸಾರ್ವಜನಿಕ ಗಣೇಶೋತ್ಸವವನ್ನು ರಾಜ್ಯ ಸರ್ಕಾರ ನಿರ್ಬಂಧಿಸಿ ಆದೇಶ ಹೊರಡಿಸಿರುವುದನ್ನು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಈ ಆದೇಶವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಆಗಸ್ಟ್ 21 ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಸರಕಾರದ ಈ ನಿರ್ಧಾರ ಧಿಕ್ಕಾರ ಹೇಳುತ್ತೇನೆ. ರಾಜ್ಯದ ಎಲ್ಲ ಗಣೇಶೋತ್ಸವ ಮಂಡಳಗಳು, ಭಜನಾ ಮಂಡಳಿಗಳು, ಧರ್ಮದರ್ಶಿಗಳು ಅಂದು ಸರಕಾರಕ್ಕೆ ಎಚ್ಚರಿಕೆ ರವಾನಿಸಲಿವೆ ಎಂದು ತಿಳಿಸಿದರು.
ಗಣೇಶೋತ್ಸವವನ್ನು ನಿರ್ಬಂಧಿಸಿರುವುದನ್ನು ನಾವು ವಿರೋಧಿಸುತ್ತೇವೆ. ಈ ಆದೇಶ ತಕ್ಷಣ ವಾಪಸ್‌ ಪಡೆಯಬೇಕು. ಕೋವಿಡ್ ನೆಪದಲ್ಲಿ ಹಿಂದೂ ಹಬ್ಬಗಳನ್ನು ತಡೆಯುವ ಪ್ರಯತ್ನ ಇದಾಗಿದೆ. ಮೊಹರಂಗೆ ಇಲ್ಲದ ನಿರ್ಬಂಧ ಹಿಂದೂ ಹಬ್ಬ, ದೇವಸ್ಥಾನ, ಜಾತ್ರೆಗಳಿಗೆ ಏಕೆ ಎಂದ ಅವರು, ಇದೇ ತಿಂಗಳ 23 ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿವೆ. ರಾಜ್ಯಾದ್ಯಂತ ಹೋಟೆಲ್ ಗಳು, ಬಸ್ ಗಳು, ಮಾಲ್ ಗಳು, ಜನಜೀವನ ಎಂದಿನಂತೆ ಮತ್ತೆ ಮುಕ್ತವಾಗಿದೆ. ಬಿಜೆಪಿ ಸರ್ಕಾರ ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಮಹಾನಗರ ಪಾಲಿಕೆ ಚುನಾವಣೆ ನಡೆಸುತ್ತಿದೆ. ಆದರೆ ಅಲ್ಲೆಲ್ಲ ಕೋವಿಡ್ ಬರುವುದಿಲ್ಲವೇ ? ಆದರೆ ಯಾವುದಕ್ಕೂ ಇಲ್ಲದ ನಿರ್ಬಂಧ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಏಕೆ ಎಂದು ಪ್ರಶ್ನಿಸಿದರು.
ಲಕ್ಷಾಂತರ ಜನರ ಭಕ್ತಿ, ಸಂಪ್ರದಾಯ, ಜೀವನ ಗಣೇಶೋತ್ಸವದಲ್ಲಿ ಅಡಗಿದೆ. ಒಂದು ಸಲ ಗಣೇಶೋತ್ಸವ ಪ್ರಾರಂಭಿಸಿದರೆ ಮತ್ತೆ ಪ್ರತಿ ವರ್ಷವೂ ನಡೆಸಬೇಕು ಎಂಬ ಭವ್ಯ ಪರಂಪರೆ ಇದೆ. ಆದರೆ ತಪ್ಪಿದರೆ ಅನಾಹುತ ಸಂಭವಿಸಬಹುದು ಎಂಬ ನಂಬಿಕೆ ಇದೆ. ಆದರೆ ಇದೀಗ ಸರ್ಕಾರವೇ ಇದಕ್ಕೆ ಅವಕಅಶ ನೀಡುತ್ತಿಲ್ಲ. ಜನರ ಗಣೇಶೋತ್ಸವ ಆಚರಣೆಗೆ ಅವಕಾಶ ಮಾಡಿ ಕೊಡಬೇಕು. 100 ನಿಯಮ ಹಾಕಿ. ಅದನ್ನು ಪಾಲಿಸುತ್ತೇವೆ. ಆದರೆ ಸಂಪ್ರದಾಯ ಮುರಿಯಲು ಮಾತ್ರ ಹೋಗಬೇಡಿ ಎಂದು ಅವರು ಎಚ್ಚರಿಸಿದರು.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement