ನಾಡಬಂದೂಕು ಸಿಡಿಸಿ ಸ್ವಾಗತ ಕೋರಿಲ್ಲ : ಸಚಿವ ಭಗವಂತ ಖೂಬಾ ಸ್ಪಷ್ಟನೆ

ಯಾದಗಿರಿ : ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವ ಭಗವಂತ ಖೂಬಾಗೆ ಸ್ವಾಗತ ಕೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ‘ಎಫ್‌ಐಆರ್‌ ದಾಖಲಾಗಿದೆ .
ಈ ಘಟನೆ ಕುರಿತು ಕೇಂದ್ರ ಸಚಿವ ಭಗವಂತ ಖೂಬಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ನಾಡಬಂದೂಕು ಸಿಡಿಸಿ ಸ್ವಾಗತ ಕೋರಿಲ್ಲ, ಅಲ್ಲಿ ನಾಡ ಬಂದೂಕು ಇರಲಿಲ್ಲ. ಪಟಾಕಿ ಪುಡಿ ಹಾಕಿ ಶಬ್ದ ಮಾಡಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಭಾಗದಲ್ಲಿ ಹಳೆಯ ವ್ಯವಸ್ಥೆ ಇದೆ. ಇತಿಹಾಸ ತೆಗೆದು ಒಂದು ಸಲ ನೋಡಿ. ಅಲ್ಲಿ ಗುಂಡು ಹಾರಿಸಿಲ್ಲ. ಅದನ್ನು ತಿರುಚಬೇಡಿ. ಗುಂಡು ಹಾರಿಸಿದ್ದರೆ ಖುದ್ದು ನಾವೇ ಕರೆಸಿ ಮಾತನಾಡುತ್ತಿದ್ದೆ. ಒಂದು ವೇಳೆ ತಪ್ಪು ಮಾಡಿದ್ದರೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿರುವ ಸಚಿವರು, ಗಾಳಿಯಲ್ಲಿ ಗುಂಡುಹಾರಿಸಿದ್ದು ಎಂಬುದು ಸತ್ಯಕ್ಕೆ ದೂರವಾದದ್ದು, ಅದು ನಾಡ ಬಂದೂಕು ಅಲ್ಲ ಎಂದು ಅವರು ಹೇಳಿದ್ದಾರೆ. .

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement