ಕರ್ನಾಟಕದಲ್ಲಿ ಗುರುವಾರ ಹತ್ತು ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಪ್ರಕರಣ

ಬೆಂಗಳೂರು:ರಾಜ್ಯದಲ್ಲಿ ಹತ್ತು ಜಿಲ್ಲೆಗಳಲ್ಲಿ 10ಕ್ಕೂ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ (ಗುರುವಾರ) 1,432 ಕೊರೊನಾ ಸೋಂಕು ಪತ್ತೆಯಾಗಿದೆ. ಇದೆ ವೇಳೆ ಸೋಂಕಿನಿಂದಾಗಿ 27 ಜನರು ಮೃತಪಟ್ಟಿದ್ದಾರೆ ಹಾಗೂ 1538 ಸೋಂಕಿತರು ಚೇತಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 29,34,624ಕ್ಕೆ ಏರಿಕೆಯಾಗಿದೆ. ಒಟ್ಟು 2876377 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 37,088ಕ್ಕೆ ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 21,133 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ 318, ದಕ್ಷಿಣ ಕನ್ನಡ 326, ಹಾಸನ 94, ಮೈಸೂರು 103, ಉಡುಪಿ 162 ಸೇರಿದಂತೆ ಕಳೆದ 24 ಗಂಟೆಯಲ್ಲಿ 1,432 ಜನರಿಗೆ ಕೊರೊನಾ ಸೋಂಕು ವರದಿಯಾಗಿದೆ.
ಜಿಲ್ಲಾವಾರು ಸಂಪೂರ್ಣ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಕೆಳಗೆ ಕೊಡಲಾಗಿದೆ.

19-08-2021 HMB Kannada

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಂಜಲಿ ಹತ್ಯೆ ಪ್ರಕರಣ : ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ

ನಿಮ್ಮ ಕಾಮೆಂಟ್ ಬರೆಯಿರಿ

advertisement