ಧಾರವಾಡ: ಜೆಎಸ್ಎಸ್ ಐಟಿಐ ನಲ್ಲಿ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐಟಿಐ ಕಾಲೇಜಿನಲ್ಲಿ
ಆಗಸ್ಟ್‌ ೨೬ರಂದು ಬೆಳಿಗ್ಗೆ ೧೦ಗಂಟೆಗೆ ಉತ್ತರ ಪ್ರದೇಶದ ಯುಫ್ಲೆಕ್ಸ್‌ ಕಂಪನಿಯವರು ಧಾರವಾಡದಲ್ಲಿ ನೂತನವಾಗಿ ಪ್ರಾರಂಭಿಸಿದ ಕೈಗಾರಿಕೆಗೆ ಟೆಕ್ನಿಕಲ್ ಟ್ರೈನೀ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ.
೨೦೧೮, ೨೦೧೯, ೨೦೨೦ ಹಾಗೂ ೨೦೨೧ ರಲ್ಲಿ ಐಟಿಐ ಫಿಟ್ಟರ್, ಇಲೆಕ್ಟ್ರಿಕಲ್, ಟರ್ನರ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, ಮಶಿನಿಷ್ಟ್‌ ಪಾಸಾದ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.
ಈಗಾಗಲೇ ದಿನಾಂಕ ೦೧.೦೭.೨೦೨೧ ರಂದು ನಡೆದ ಸಂದರ್ಶನಕ್ಕೆ ಹಾಜರಾದ ವಿದ್ಯಾರ್ಥಿಗಳಿಗೆ ಈ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆಸಕ್ತರು ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ಬಯೋಡೆಟಾ, ೨ ಪೋಟೊ, ಆಧಾರ ಕಾರ್ಡ್‌ ಝರಾಕ್ಸ್‌ ಪ್ರತಿ ಹಾಗೂ ಅಂಕಪಟ್ಟಿಯ ಝರಾಕ್ಸ್‌ ಪ್ರತಿಯನ್ನು ತರಬೇಕು ಎಂದು ತಿಳಿಸಲಾಗಿದ್ದು, . ದಿನಾಂಕ ೨೪.೦೮.೨೦೨೧ ರ ಒಳಗಾಗಿ ತಮ್ಮ ಹೆಸರುಗಳನ್ನು ೦೮೩೬-೨೪೬೨೨೦೨ ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement