ಇಬ್ಬರ ಅಂಗಾಂಗ ದಾನ, 14 ಜನರಿಗೆ ಜೀವದಾನ

ಮೈಸೂರು: ಮಿದುಳು ವೈಫಲ್ಯಕ್ಕೆ ಒಳಗಾಗಿದ್ದ ಇಬ್ಬರ ಅಂಗಾಗಗಳನ್ನು ದಾನ ಮಾಡಲಾಗಿದ್ದು, ಇದರಿಂದ 14 ಜನರಿಗೆ ಜೀವದಾನವಾಗಿದೆ.
ಈ ಇಬ್ಬರು ದಾನ ಮಾಡಿದ ಅಂಗಗಳು 14 ಜೀವಗಳನ್ನು ಉಳಿಸಿವೆ. ೪ ಮೂತ್ರ ಪಿಂಡಗಳು (ಕಿಡ್ನಿ) 2 ಲಿವರ್, 4 ಹೃದಯದ ಕವಾಟ, 4 ಕಾರ್ನಿಯಗಳನ್ನುಈ ಇಬ್ಬರು ದಾನಮಾಡಿದ್ದರು. ಅದನ್ನು ಒಂದೇ ಬಾರಿ 14 ಜನರಿಗೆ ಅಳವಡಿಸಲಾಯಿತು.
ಹುಣಸೂರಿನ ಲಾರೆನ್ಸ್ (40) ಎಂಬವರು ಆ.14ರಂದು ಭೀಕರ ರಸ್ತೆ ಅಪಘಾತದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದರು. ನಂತರ ಅವರ ಕುಟುಂಬಸ್ಥರು ಅವರ ಅಂಗಾಂಗಳನ್ನು ದಾನ ಮಾಡಿದರು. ಅಂತೆಯೇ, ಕುಶಾಲನಗರದ ಶೋಭಾ ಅವರು ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದರು. ಅವರ ಮಿದುಳು ಕೂಡ ನಿಷ್ಕ್ರಿಯವಾಗಿತ್ತು. ಹೀಗಾಗಿ, ಅವರ ಕುಟುಂಬಸ್ಥರು ಸಹ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಿದರು ಎಂದು ಆಂದೋಳನ.ಇನ್‌ ವರದಿ ಮಾಡಿದೆ.
ಈ ಅಂಗಾಂಗಗಳನ್ನು 14 ಜನರಿಗೆ ಅಳವಡಿಸಲಾಯಿತು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement